Header Ads
Header Ads
Breaking News

ನುಡಿದಂತೆ ನಡೆದ ಉಡುಪಿಯ ಜಯಕರ್ನಾಟಕ. ಪಾಂಬೂರಿನ ಮಾನಸ ವಿಶೇಷಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಕೇಶ ವಿನ್ಯಾಸ.

 

 ವರ್ಷವಿಡೀ ವಿಶೇಷ ಮಕ್ಕಳ ಕೇಶ ವಿನ್ಯಾಸ ಮಾಡೋದಾಗಿ ಭರವಸೆ ನೀಡಿದ್ದ ಉಡುಪಿಯ ಜಯಕರ್ನಾಟಕ ಸಂಘಟನೆ ಇದೀಗ ವರ್ಷಪೂರ್ತಿ ವಿಶೇಷ ಮಕ್ಕಳ ಕೇಶ ವಿನ್ಯಾಸದ ಸೇವೆ ಗೈದು ನುಡಿದಂತೆ ನಡೆದಿದೆ.ಶಿರ್ವ ಬಳಿ ಇರುವ ಪಾಂಬೂರಿನಲ್ಲಿರುವ ಮಾನಸ ವಿಶೇಷ ಮಕ್ಕಳ ಶಾಲೆಗೆ ಕಳೆದ ವರ್ಷ ಇದೇ ತಿಂಗಳಲ್ಲಿ ರಮೇಶ್ ಶೆಟ್ಟಿ ನೇತೃತ್ವದ ಜಯಕರ್ನಾಟಕ ಸಂಘಟನೆ ಭೇಟಿ ನೀಡಿತ್ತು.ಅಮಾತ್ರವಲ್ಲದೇ ವರ್ಷ ಪೂರ್ತಿ ಮಕ್ಕಳ ಕೇಶ ವಿನ್ಯಾಸದ ಜವಾಬ್ಧಾರಿಯನ್ನು ಪಡೆದಿತ್ತು. ಜಯಕರ್ನಾಟಕ ಯಶೋಧರ್ ಭಂಡಾರ ಅವರು ಮಕ್ಕಳ ಕೇಶ ವಿನ್ಯಾಸವನ್ನು ನಡೆಸಿದ್ದರು. ಇಂದು ಈ ಕಾರ್ಯಕ್ರಮ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಜಯಕರ್ನಾಟಕ ಸಂಘಟನೆ ಮತ್ತೆ ವಿಶೇಷ ಮಕ್ಕಳ ಸಾಲೆಗೆ ಭೇಟಿ ನಿಡಿದ್ದು ಇನ್ನೊಂದು ವರ್ಷ ಮಕ್ಕಳ ಕೇಶ ವಿನ್ಯಾಸದ ಜವಬ್ಧಾರಿಯನ್ನು ಪಡೆದು ಮತ್ತೊಂದು ಮಾನವೀಯ ಕಾರ್ಯಕ್ಕೆ ಮುಂದಾಯಿತು.ಇಂದು ಸುಮಾರು ಐವತಕ್ಕೂ ಅಧಿಕ ಮಕ್ಕಳ ಕೆಶ ವಿನ್ಯಾಸ ನಡೆಯಿತು. ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆಯ ಆಡಳಿತಾಧಿಕಾರಿ ಜೋಸೆಫ್ ನೊರಹ್ನಾ, ಹಾಗೂ ಅದ್ಯಕ್ಷ ಹೆನ್ರಿ ಮೆನೆಜಸ್ ಜಯಕರ್ನಾಟಕ ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು. ಅಗತ್ಯವಾಗಿ ಕೆಶ ವಿನ್ಯಾಸ ಮಾಡಬೇಕಾಗುತ್ತದೆ.ಆದ್ದರಿಂದ ಈ ಜವಬ್ಧಾರಿಯನ್ನು ಜಯಕರ್ನಾಟಕ ಪಡೆಯುವ ಮೂಲಕ ನಮ್ಮ ಕೆಲಸ ಕಡಿಮೆ ಮಾಡಿದೆ ಅಂತ ಅಭಿಪ್ರಾಯಪಟ್ಟರು. ಜಯಕರ್ನಾಟಕ ಸಂಸ್ಥೆಯ ಜಿಲ್ಲಾಧ್ಯಕ್ಷ ರಮೇಶ್ ಶೆಟ್ಟಿ, ಕಾಯಾಕ್ಷ ಅಣ್ಣಪ್ಪ ಕುಲಾಲ್, ಮಹಿಳಾ ಅಧ್ಯಕ್ಷೆ ಜಯಶ್ರೀ, ಮಾರ್ಕ್ ಡಿಸೋಜಾ, ಗಣೇಶ್ ರಾಜ್ ಸರಳೇಬೆಟ್ಟು ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply