Header Ads
Header Ads
Header Ads
Breaking News

ನೂತನವಾಗಿ ನಿರ್ಮಾಣಗೊಂಡ ಪಡೀಲು ಕೆಳ ಸೇತುವೆ ಸಂಸದ ನಳಿನ್ ಕುಮಾರ್‌ರಿಂದ ಲೋಕಾರ್ಪಣೆ

ರಾಷ್ಟ್ರೀಯ ಹೆದ್ದಾರಿ 75 ರ ಪಡೀಲ್-ಕೊಡಕ್ಕಾಲ್ ಬಳಿ ನಿರ್ಮಿಸಲಾಗಿರುವ ರೈಲ್ವೆ ಕೆಳಸೇತುವೆ ಲೋಕಾರ್ಪಣೆಗೊಂಡಿತು. ಸುಮಾರು 16.50 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕೆಳಸೇತುವೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸುರತ್ಕಲ್-ಬಿ.ಸಿ ರೋಡ್ ರಾ ಷ್ಟ್ರಿಯಾ ಹೆದ್ದಾರಿಯನ್ನು ಸಾಗರ್‌ಮಲ್ ಯೋಜನೆಯಡಿ 500  ಕೋ.ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಕೇದ್ರ ಸರಕಾರ ಮಂಜೂರಾತಿ ನೀಡಿದೆ ಎಂದರು.


ಈ ಸಂದರ್ಭ ಕಾರ್ಪೊರೇಟರ್‌ಗಳಾದ ಪ್ರಕಾಶ್, ಸುಧೀರ್ ಶೆಟ್ಟಿ ಕಣ್ಣೂರು, ರೂಪಾ ಡಿ. ಬಂಗೇರ, ವಿಜಯ್ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು. ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಅಜಿತ್ ಸ್ವಾಗತಿಸಿದರು.

ವರದಿ: ನಾಗರಾಜ್, ಮಂಗಳೂರು

Related posts

Leave a Reply