Header Ads
Breaking News

ನೆರೆ ಸಂತ್ರಸ್ಥರಿಗೆ ಸ್ಪಂಧಿಸ ಬೇಕಾದ ಸರ್ಕಾರ ಸಂತ್ರಸ್ಥರ ಮೇಲೆ ಲಾಠಿ ಬೀಸುತ್ತಿದೆ : ವಿನಯ ಕುಮಾರ್ ಸೊರಕೆ

ಮಹಾಮಳೆಯಿಂದ ಮನೆ-ಮಠಗಳನ್ನು ಕಳೆದುಕೊಂಡು ಸಂತ್ರಸ್ಥರಾದ ರಾಜ್ಯದ ಜನತೆಯ ನೆರವಿಗೆ ಬರಬೇಕಾಗಿದ್ದ ಸರ್ಕಾರ, ಜನರು ಪರಿಹಾರ ನೀಡುವಂತ್ತೆ ಸರ್ಕಾರವನ್ನು ಆಗ್ರಹಿಸಿದರೆ

ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಮುಂಭಾಗದಲ್ಲೇ ಪೊಲೀಸರು ಠಾಠಿ ಪ್ರಹಾರ ಮಾಡುವ ಮೂಲಕ ತಮ್ಮ ಸರ್ಕಾರದ ತತ್ವ-ಸಿದ್ಧಾಂತಗಳನ್ನು ಜನತೆಯ ಮುಂದೆ ತೆರೆದಿಟ್ಟಂತ್ತಾಗಿದೆ ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಕಾಪು ರಾಜೀವ ಭವನದಲ್ಲಿ ಕಾಪು ನಗರ ಕಾಂಗ್ರೆಸ್ ಸಮಿತಿಯ ಆತಿಥ್ಯದಲ್ಲಿ ನಡೆದ “ಆಟಿದ ಅಟಿಲ್” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿನ ಆಷಾಢದಿನದ ಕಷ್ಟ ಕೋಟಲೆಗಳ ಬಗ್ಗೆ ಯುವ ಜನತೆಗೆ ತಿಳಿಸಲು ವಿಶೇಷ ಆಮಂತ್ರಿತರಾಗಿ ಆಗಮಿಸಿದ ಚಿಂತಕ ಪಿ.ಕೆ. ಸದಾನಂದ, ಮದುವೆಯ ಹಿಂದಿನ ದಿನ ಮುದ್ದು ಇಡುವ ಕಾರ್ಯಕ್ರಮ ಕ್ರಮೇಣ ಮದಿರಂಗಿಯಾಗಿ ಬದಲಾಗಿ, ಮತ್ತೂ ರೂಪಾಂತರಗೊಂಡು ಇದೀಗ ಮೆಹೆಂದಿ ಎನ್ನುವ ಮೂಲಕ ಅರ್ಥ ಕಳೆದುಕೊಂಡು ಯುವ ಜನತೆಯನ್ನು ದಾರಿ ತಪ್ಪಿಸುವತ್ತ ಮುಖ ಮಾಡಿದೆ ಎಂಬುದಾಗಿ ವಿಷಾಧ ವ್ಯಕ್ತ ಪಡಿಸಿದ್ದಾರೆ.

ಈ ಸಂದರ್ಭ ಕಾಪು ಬ್ಲಾಕ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ, ಕಾಂಗ್ರೆಸ್ ಪ್ರಮುಖರಾದ ದೇವಿಪ್ರಸಾದ್ ಶೆಟ್ಟಿ, ವಿನಯ ಬಳ್ಲಾಲ್, ಎಚ್. ಅಬ್ದುಲ್ಲ, ಮನಾರ್ ಹಿಬ್ರಾಹಿಂ, ಹರೀಶ್ ನಾಯಕ್,ಸೌಮ್ಯಾ ಸಂಜೀವ್, ಪ್ರಶಾಂತ್ ಜತ್ತನ್ನ, ಕರುಣಾಕರ್ ಪೂಜಾರಿ, ಕಿಶೋರ್ ಕುಮಾರ್ ಎರ್ಮಾಳ್, ಹಸನ್ ಕಂಚಿನಡ್ಕ, ಗಣೇಶ್ ಕೋಟ್ಯಾನ್ ಮುಂತಾದವರಿದ್ದರು.

Related posts

Leave a Reply

Your email address will not be published. Required fields are marked *