Header Ads
Breaking News

ನೆಲ್ಯಾಡಿಯ ಲಾವತ್ತಡ್ಕದಲ್ಲಿ ಟೆಂಪೋ ಟ್ರಾವೆಲರ್ ಪಲ್ಟಿ : ವಾಹನದಲ್ಲಿ ಜಾನುವಾರು ಮಾಂಸ ಪತ್ತೆ

ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಲಾವತ್ತಡ್ಕದಲ್ಲಿ ಮಂಗಳವಾರ ಮುಂಜಾನೆ ಟೆಂಪೋ ಟ್ರಾವೆಲ್ಲರ್‌ವೊಂದು ಪಲ್ಟಿಯಾಗಿದೆ. ಪರಿಶೀಲನೆ ವೇಳೆ ವಾಹನದಲ್ಲಿ ಜಾನುವಾರು ಮಾಂಸ ಪತ್ತೆಯಾಗಿದೆ. ವಾಹನ ಪಲ್ಟಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ನೆಲ್ಯಾಡಿ ಹೊರಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದ ವೇಳೆ ಟರ್ಪಲ್‌ವೊಂದರಲ್ಲಿ ಕಟ್ಟಿದ್ದ ಜಾನುವಾರು ಮಾಂಸ ಪತ್ತೆಯಾಗಿದೆ. ವಾಹನ ಹಾಸನ ಕಡೆಯಿಂದ ಉಪ್ಪಿನಂಗಡಿಗೆ ಬರುತ್ತಿದ್ದ ವೇಳೆ ಲಾವತ್ತಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಮಾಂಸ ಹಾಗೂ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು ಆರೋಪಿಗಳು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.

Related posts

Leave a Reply

Your email address will not be published. Required fields are marked *