Header Ads
Header Ads
Breaking News

ನೆಹರು ಮೈದಾನದಲ್ಲಿ 64ನೇ ಕನ್ನಡ ರಾಜೋತ್ಸವದ ಸಂಭ್ರಮ : ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

ನಾಡಿನಾದ್ಯಂತ ಇಂದು 64ನೇ ಕನ್ನಡ ರಾಜೋತ್ಸವದ ಸಂಭ್ರಮ ಮನೆಮಾಡಿದ್ದು, ಮಂಗಳೂರಿನ ನೆಹರು ಮೈದಾನದಲ್ಲಿಯೂ ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜೋತ್ಸವನ್ನು ಅದ್ದುರಿಯಾಗಿ ಆಚರಿಸಲಾಯಿತು.
ನಗರದ ನೆಹರು ಮೈದಾನದಲ್ಲಿ 64ನೇ ಕನ್ನಡ ರಾಜೋತ್ಸವದ ಅಂಗವಾಗಿ ಮಂಗಳೂರಿನ ಜ್ಯೋತಿ ವೃತ್ತದಿಂದ ನೆಹರು ಮೈದಾನದ ವರೆಗೆ ಅಕರ್ಷಕ ಮೆರವಣಿಗೆ ನಡೆಯಿತು. ದ್ವಜಾರೋಹಣವನ್ನು ನೇರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಕನ್ನಡ ರಾಜೋತ್ಸವದ ಸಂದೇಶವನ್ನು ನೀಡಿದರು. ಬಳಿಕ ಕರ್ನಾಟಕ ರಾಜ್ಯ ಮೀಸಲು ಪೋಲಿಸ್ ಪಡೆ, ಜಿಲ್ಲಾ ಶಶಸ್ತ್ರ ಪೋಲಿಸ್ ಪಡೆ, ಮಹಿಳಾ ಪೋಲಿಸ್ ಪಡೆ, ಗೃಹ ರಕ್ಷಕ ದಳ, ಅಗ್ನಿಶಾಮಕ ದಳ, ಎನ್‌ಸಿಸಿ, ರಸ್ತೆ ಸುರಕ್ಷಾ ಕಾವಲು ಬಾಲಕರ ಮತ್ತು ಬಾಲಕಿಯರ ತಂಡಗಳು ಪಥಸಂಚಲನವನ್ನು ನಡೆಸುವ ಮೂಲಕ ರಾಜೋತ್ಸವ ಕಾರ್ಯಕ್ರಮಕ್ಕೆ ಮೆರುಗನ್ನು ತಂದರು ಇನ್ನೂ ಈ ಪಥಸಂಚಲನದ ವಿದ್ಯಾರ್ಥಿಗಳ ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಬಹುಮಾನವನ್ನು ಘೋಷಿಸಲಾಯಿತು. ಇನ್ನು ನಗರದ ಅನೇಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ನೆರೆದಿದ್ದವರ ಮನಗೆದ್ದಿತು.
ಇನ್ನೂ ಕಾರ್ಯಕ್ರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ, ಐವನ್ ಡಿ’ಸೋಜಾ, ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್, ಇನ್ನೂ ಆನೇಕ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *