Header Ads
Header Ads
Breaking News

ಅಜೆಕಾರು ಗ್ರಾಮದ ಹೆರ್ಮುಂಡೆಯ ಗುತ್ತುವಿನಲ್ಲಿ ಕೃಷಿ ಸಂಭ್ರಮ : ನೇಜಿ ನೆಟ್ಟು ಓಬೇಲೆ ಹಾಡಿನೊಂದಿಗೆ ಸಂಭ್ರಮಿಸಿದ ಜನತೆ

ಕೃಷಿ ಕಾರ್ಯದಲ್ಲಿ ಖುಷಿ ಕಂಡರು. ನೇಜಿ ನೆಟ್ಟು ಓಬೇಲೆ ಹಾಡಿನೊಂದಿಗೆ ಸಂಭ್ರಮಿಸಿದರು. ಇದಕ್ಕೊಂದು ಅಪೂರ್ವ ಅವಕಾಶ ದೊರಕಿದ್ದು ಕಾರ್ಕಳದ ಅಜೆಕಾರು ಗ್ರಾಮದ ಹೆರ್ಮುಂಡೆ ಕಲಾಯಿಗುತ್ತುವಿನಲ್ಲಿ. ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ವೇದಿಕೆ ಮಣಿಪಾಲದ್ದ ಸದಸ್ಯರು ಬೇಸಾಯ ಕಾರ್ಯದಲ್ಲಿ ತೊಡಗಿಸಿಕೊಂಡು ಮೆಚ್ಚುಗೆಗೆ ಪಾತ್ರರಾದರು. ಕಲಾಯಿಗುತ್ತು ಲಕ್ಷ್ಮೀ ಸುಬ್ಬಣ್ಣ ನಾಯ್ಕ ಅವರು 156 ಎಕ್ರೆ ಕೃಷಿ ಭೂಮಿ ಇತ್ತು. ಅವರ ಪುತ್ರರು ಕೃಷಿ ಭೂಮಿಯನ್ನ ಹಾಗೆಯೇ ಜತನದಿಂದ ಕಾಪಾಡಿಕೊಂಡು ಬಂದಿದ್ದು, ಗದ್ದೆಯನ್ನೂ ಉಳಿಸಿಕೊಂಡು ಬೇಸಾಯ ಕಾರ್ಯ ಮಾಡುತ್ತ ಮಾದರಿಯಾಗಿ ಗುರುತಿಸಿಕೊಂಡಿದ್ದಾರೆ. ವೇದಿಕೆ ಅಧ್ಯಕ್ಷೆ ಮೋಹಿನಿ ನರಸಿಂಹ ನಾಯಕ್ ಸೇರಿದಂತೆ ಸುಮಾರು 25 ಮಂದಿ ಸದಸ್ಯರು ನೇಜಿ ಕಾರ್ಯದಲ್ಲಿ ತೊಡಗಿಸಿಕೊಂಡರು. ವೈದ್ಯರು, ವಕೀಲರು, ಪ್ರಾಂಶುಪಾಲರು, ಉಪನ್ಯಾಸಕಿಯರು ಬೇಸಾಯ ಕಾರ್ಯದಲ್ಲಿ ನಿರತರಾಗಿದ್ದರು. ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ವೇದಿಕೆ ಮಣಿಪಾಲ ಇದರ ಕಾರ್ಯದರ್ಶಿ ವಿದ್ಯಾನಾಯಕ್ ಮಾತನಾಡುತ್ತಿರುವುದು. 

Related posts

Leave a Reply

Your email address will not be published. Required fields are marked *