Header Ads
Header Ads
Breaking News

ನ್ಯಾಯಾಲಯದ ಮೇಲೆ ಜನರು ಬಲವಾದ ನಂಬಿಕೆಯಿಟ್ಟಿದ್ದಾರೆ : ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕ ಹೇಳಿಕೆ

ಕಾರ್ಕಳ: ನ್ಯಾಯಾಲಯದ ಮೇಲೆ ಜನರು ಬಲವಾದ ನಂಬಿಕೆಯನ್ನಿಟ್ಟಿದ್ದಾರೆ. ಅವರ ನಂಬಿಕೆಗೆ ಪೂರಕವಾಗಿ ನ್ಯಾಯದಾನ ಮಾಡುವುದು ನ್ಯಾಯಾಂಗದ ಕರ್ತವ್ಯವಾಗಿದೆ. ನ್ಯಾಯ ಕೇಳಿ ಬರುವವರಿಗೆ ನ್ಯಾಯಾಧೀಶರು ಶೀಘ್ರ ಹಾಗೂ ನಿಖರವಾಗಿ ನ್ಯಾಯ ನೀಡಲು ವಕೀಲರು ಸಹಕರಿಸಬೇಕು ಎಂದು ಕರ್ನಾಟಕದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕ ಹೇಳಿದರು. ಅವರು ಕಾರ್ಕಳ ನ್ಯಾಯಾಲಯ ನೂತನ ಸಂಕೀರ್ಣದ ಶಿಲಾನ್ಯಾಸ ಕಾರ್ಯಕ್ರಮದ ಬಳಿಕ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿ ನೂತನ ಸಂಕೀರ್ಣವು ಶೀಘ್ರವಾಗಿ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಅಬ್ದುಲ್‌ನಜೀರ್ ನ್ಯಾಯಾಲಯದ ನೂತನ ಸಂಕೀರ್ಣದ ಶಿಲಾನ್ಯಾಸ ನೆರವೇರಿಸಿ ಶುಭಕೋರಿದರು. 

ಸಮಾರಂಭದ ಅಧ್ಯಕ್ಷತೆಯನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ನ್ಯಾಯಾಲಯದ ಆಡಳಿತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಬಿ.ವೀರಪ್ಪ, ಭಾರತ ಸರಕಾರದ ಹೆಚ್ಚುವರಿ ಸಾಲಿಸಿಟರ್ ಕೆ.ಎಂ.ನಟರಾಜ್, ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ವಕೀಲರ ಸಂಘದ ಅಧ್ಯಕ್ಷ ಬಿ.ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಸೆಷನ್ಸ್ ನ್ಯಾಯಧೀಶ ಸಿ.ಎಂ.ಜೋಷಿ, ಉಚ್ಚ ನ್ಯಾಯಾಲಯದ ರಿಜಿಸ್ಟ್‌ರ್ ಜನರಲ್ ವಿ.ಶ್ರೀಶನಂದ, ಕಾರ್ಕಳ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅಮೃತಾ ಎಸ್.ರಾವ್, ಕಾರ್ಕಳ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಪುಟ್ಟರಾಜು, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಸತೀಶ್, ತಹಶೀಲ್ದಾರ್ ಪುರಂದರ ಹೆಗ್ಡೆ, ವಕೀಲರ ಸಂಘದ ಕಾರ್ಯದರ್ಶಿ ಸಂಪತ್‌ಕುಮಾರ್ ಭಾಗವಹಿಸಿದರು. ಎಡಿಶನಲ್ ಎಸ್‌ಪಿ ಕುಮಾರ್ ಚಂದ್ರ, ಎಎಸ್ಪಿ ಕೃಷ್ಣಕಾಂತ್ ಭದ್ರತೆ ಏರ್ಪಡಿಸಿದರು.

Related posts

Leave a Reply

Your email address will not be published. Required fields are marked *