Header Ads
Header Ads
Breaking News

ನ.11ರಂದು ದೇಶಿ ತಳಿಯ ಬೆಕ್ಕಿನ ಮರಿ ಮತ್ತು ನಾಯಿಮರಿ ದತ್ತುಸ್ವೀಕಾರ ಶಿಬಿರ

ನೂತನವಾಗಿ ಶುಭಾರಂಭಗೊಂಡಿರುವ ಮಂಗಳೂರಿನ ಪ್ರಸಿದ್ಧ ಪಲ್ಲವೀ’ಸ್ ಬೌ ಆಂಡ್ ಮಿಯಾಂವ್ ಪೆಟ್‍ಶಾಪ್ ಮತ್ತು ಆನಿಮಲ್ ಕೇರ್ ಟ್ರಸ್ಟ್ ಸಹಭಾಗಿತ್ವದಲ್ಲಿ ದೇಶಿ ತಳಿಯ ಬೆಕ್ಕಿನ ಮರಿ ಮತ್ತು ನಾಯಿಮರಿ ದತ್ತುಸ್ವೀಕಾರ ಶಿಬಿರವನ್ನು ಆಯೋಜಿಸಲಾಗಿದೆ. ನ.11ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಶಿಬಿರ ನಡೆಯಲಿದೆ.
ಸಾಕುಪ್ರಾಣಿಗಳಾದ ಬೆಕ್ಕು ಮತ್ತು ನಾಯಿಗಳು ಎಂದರೆ ಹಲವಾರು ಮಂದಿಗೆ ಅಚ್ಚುಮೆಚ್ಚು. ಈ ಪೈಕಿ ದೇಶೀಯ ತಳಿಯ ನಾಯಿ ಬೆಕ್ಕುಗಳಿಗೆ ಸಿಗುವ ಪ್ರಾಮುಖ್ಯತೆ ಸ್ವಲ್ಪಮಟ್ಟಿಗೆ ಕಡಿಮೆ. ಹಲವಾರು ಸಂದರ್ಭಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಜನಿಸುವ ಬೆಕ್ಕು, ನಾಯಿಯ ಮರಿಗಳನ್ನು ರಸ್ತೆಬದಿಯಲ್ಲಿ ತಂದುಬಿಡುವ ಪರಿಪಾಠವೂ ನಡೆದುಕೊಂಡು ಬಂದಿದೆ. ಇಂತಹ ಕೃತ್ಯಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮಂಗಳೂರಿನ ಶಕ್ತಿನಗರದಲ್ಲಿರುವ ಆನಿಮಲ್ ಕೇರ್ ಟ್ರಸ್ಟ್ ಪ್ರಯತ್ನ ಮಾಡಿಕೊಂಡು ಬಂದಿದ್ದು, ಇದೀಗ ಮಂಗಳೂರಿನಲ್ಲಿ ನೂತನವಾಗಿ ಶುಭಾರಂಭಗೊಂಡಿರುವ ಪಲ್ಲವೀಸ್ ಬೌ ಆಂಡ್ ಮಿಯಾಂವ್ ಪೆಟ್‍ಶಾಪ್‍ನಲ್ಲಿ ದೇಶೀ ತಳಿಯ ಬೆಕ್ಕು ಮತ್ತು ನಾಯಿಮರಿಗಳ ದತ್ತುಸ್ವೀಕಾರ ಶಿಬಿರವನ್ನು ಆಯೋಜಿಸಲಾಗಿದೆ.

 ನ.11ರಂದು ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆ ಬಳಿ ಇರುವ ಹಸನ್ ಹೆರಿಟೇಜ್ ಬಿಲ್ಡಿಂಗ್‍ನಲ್ಲಿರುವ ಪಲ್ಲವೀಸ್ ಬೌ ಆಂಡ್ ಮಿಯಾಂವ್  ಪೆಟ್ ಶಾಪ್‍ನಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ನೋಂದಾಯಿಸುವವರು 200 ರೂ. ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು ಪ್ರಾಣಿಗಳಿಗೆ ನೀಡುವ ಆಚಿಟಿ ರೇಬಿಸ್ ಲಸಿಕೆಯ ಶುಲ್ಕವನ್ನು ಒಳಗೊಂಡಿರುತ್ತದೆ. ಜೊತೆಗೆ ದತ್ತು ಸ್ವೀಕರಿಸುವವರ ವಿಳಾಸ ದೃಢೀಕರಣಕ್ಕೆ ಅಡ್ರೆಸ್ ಪ್ರೂಫ್ ಅಗತ್ಯ. ಜೊತೆಗೆ ದತ್ತು ಸ್ವೀಖರಿಸಿದ ಪ್ರಾಣಿಗಳ ಬಗ್ಗೆ ಮಾಸಿಕವಾಗಿ ಮಾಹಿತಿ ನೀಡುವುದು ಅಗತ್ಯವಾಗಿರುತ್ತದೆ.

ಮನೆಯಲ್ಲಿ ಸಾಕುವ ಎಲ್ಲಾ ಬಗೆಯ ಪ್ರಾಣಿಗಳಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲಾ ವಸ್ತುಗಳು, ಔಷಧಿಗಳು, ಆಹಾರ ಇತ್ಯಾದಿ ವಸ್ತುಗಳನ್ನು ಒಂದೇ ಸೂರಿನಡಿಯಲ್ಲಿ ಒಳಗೊಂಡಿರುವ ಪಲ್ಲವೀಸ್ ಬೌ ಆಂಡ್ ಮಿಯಾಂವ್ ಪೆಟ್ ಶಾಪ್ ಈಗಾಗಲೇ ಜನರ ಮನಗೆದ್ದಿದೆ. ಇದೀಗ ದೇಶೀ ತಳಿಯ ನಾಯಿ, ಬೆಕ್ಕು ಮರಿಗಳ ದತ್ತುಸ್ವೀಕಾರ ಶಿಬಿರವನ್ನು ಏರ್ಪಡಿಸುವ ಮೂಲಕ ಮತ್ತೊಂದು ಮಾನವೀಯ ಕಾರ್ಯಕ್ಕೆ ಮುಂದಾಗಿದೆ.

Related posts

Leave a Reply