Header Ads
Header Ads
Breaking News

ನ.15ರಿಂದ ಆಳ್ವಾಸ್ ಕೃಷಿಸಿರಿ ಸಮ್ಮೇಳನ ಆರಂಭ

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಾರ್ಷಿಕ ಉತ್ಸವವಾಗಿ ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು-ನುಡಿ-sಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ “ಆಳ್ವಾಸ್ ನುಡಿಸಿರಿ”ಯನ್ನು ಈ ವರ್ಷ ನವೆಂಬರ್ 16,17, 18ರಂದು ಮೂರು ದಿನಗಳ ಕಾಲ ನಡೆಯಲಿದೆ.ಈ ಕುರಿತು ಸುದ್ದಿಗೋಷ್ಟಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠನದ ಅಧ್ಯಕ್ಷರಾದ ಡಾ ಎಂ ಮೋಹನ ಆಳ್ವರವರು ಮಾತನಾಡಿ, ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಈ ಸಂದರ್ಭದಲ್ಲಿ ಸಾಹಿತ್ಯ, ಸಂಸ್ಕೃತಿಗಳೊಡನೆ ಜನಜೀವನಕ್ಕೆ ಮೂಲಾಧಾರವಾಗಿರುವ ಕೃಷಿಯನ್ನೂ ಮುನ್ನೆಲೆಗೆ ತರಬೇಕೆಂಬ ಇರಾದೆಯಿಂದ ನ.೧೫ರ ಸಂಜೆಯಿಂದ “ಆಳ್ವಾಸ್ ಕೃಷಿಸಿರಿ” ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.ಫಿಶರೀಶ್ ಇಲಾಖೆ, ಕೃಷಿ ಇಲಾಖೆ, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಕೃಷಿಕ ಸಮಾಜ, ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಮತ್ತು ರೈತಸಂಘಗಳ ಸಹಯೋಗಗಳೊಂದಿಗೆ ಹಮ್ಮಿಕೊಂಡ ಈ ಕೃಷಿ ಸಮ್ಮೇಳನದಲ್ಲಿ ಕೃಷಿ ಸಂಬಂಧಿ ಚಟುವಟಿಕೆಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಹಾಗೂ ಮಾರಾಟಗಳನ್ನು ಹಮ್ಮಿಕೊಳ್ಳಲಾಗಿದ್ದು ನವೆಂಬರ್ 15ರಂದು ಸಂಜೆ 5.00 ಗಂಟೆಗೆ ಉದ್ಘಾಟನೆಗೊಂಡು ದಿನಾಂಕ 16ರಿಂದ 18ರ ವರೆಗೆ ೩ ದಿನಗಳು ನಡೆಯಲಿದೆ.ಹಿರಿಯ ರೈತಮುಖಂಡ, ಕೃಷಿಪ್ರೇಮಿ, ರೈತ ಹೋರಾಟಗಾರ ದಿ.ಕೆ.ಎಸ್.ಪುಟ್ಟಣ್ಣಯ್ಯನವರ ಗೌರವಾರ್ಥ ಆಳ್ವಾಸ್ ಕೃಷಿಸಿರಿ-ಕೃಷಿ ಮೇಳ ನಡೆಯುವ ಆವರಣಕ್ಕೆ ’ಕೆ.ಎಸ್.ಪುಟ್ಟಣ್ಣಯ್ಯ ಆವರಣ’ ಎಂದು ನಾಮಕರಣ ಮಾಡಲಾಗಿದೆ

Related posts

Leave a Reply