Header Ads
Header Ads
Header Ads
Breaking News

ನ. 17ರಿಂದ 23ರವರೆಗೆ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ -2019

ಕನ್ನಡ ರಾಜ್ಯೋತ್ಸವದ ಕಲಾಸಂಭ್ರಮವಾಗಿ ನಡೆಸುವ ಏಳನೇ ವರ್ಷದ ಕನ್ನಡ ನುಡಿ ಹಬ್ಬ ಯಕ್ಷಗಾನ ತಾಳಮದ್ದಳೆ ಸಪ್ತಾಹ 2019 ನವೆಂಬರ್ 17ರಿಂದ 23ರವರೆಗೆ ನಗರದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ನಡೆಯಲಿದೆ ಎಂದು ‘ಯಕ್ಷಾಂಗನ ಮಂಗಳೂರು’ ಕಾರ್ಯಾಧ್ಯಕ್ಷ ಭಾಸ್ಕರ್ ರೈ ಕುಕ್ಕುವಳ್ಳಿ ಹೇಳಿದ್ರು.

ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ‘ಯಕ್ಷಾಂಗನ ಮಂಗಳೂರು’ ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರರ್ಶನ ವೇದಿಕೆ ಮತ್ತು ಕರ್ನಾಟಕ ಯಕ್ಷಗಾನ (ರಿ) ಪುತ್ತೂರು ಇದರ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಡಾ.ಪಿ ದಯಾನಂದ ಪೈ, ಮತ್ತು ಪಿ.ಸತೀಶ್ ಪೈ ಯಕ್ಷಗಾನ ಆದ್ಯಯನ ಕೇಂದ್ರದ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದ್ರು. ಈ ಸಂದರ್ಭ ತೋನ್ಸೆ ಪುಷ್ಕಳ ಕುಮಾರ್, ಅಶೋಕ ಮಾಡ ಕುದ್ರಾಡಿ, ಎಂ ವಿಶ್ವನಾಥ್ ಶೆಟ್ಟಿ ತೀರ್ಥಹಳ್ಳಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *