Header Ads
Header Ads
Header Ads
Breaking News

ನ.23ರಂದು ಗಡಿನಾಡ ಕನ್ನಡರಾಜ್ಯೋತ್ಸವ ಕಾರ್ಯಕ್ರಮ

ಮಂಜೇಶ್ವರ: ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಕನ್ನಡಿಗರನ್ನು ಒಟ್ಟುಗೂಡಿಸಿ ಭಾಷೆಯ ಸಂರಕ್ಷಣೆಗೆ, ಪರಸ್ಪರ ಒಗ್ಗಟ್ಟಿನಿಂದ ಕನ್ನಡಿಗರ ಸಂರಕ್ಷಣೆಗೆ ಪ್ರಯತ್ನಿಸುವ ಅಕಾಡೆಮಿಯ ಕಾರ್ಯ ಶ್ಲಾಘನೀಯ. ಪ್ರತಿಭೆಗಳ ಪಾಲಿನ ಪ್ರೋತ್ಸಾಹದ ಚಿಲುಮೆಯಾಗಿರುವ ಅಕಾಡೆಮಿಯು ಸಾಧಕರನ್ನು ಗೌರವಿಸುವ ಮೂಲಕ ಸಮಾಜದ ಎಲ್ಲಾ ವಿಭಾಗದ ಜನರನ್ನೂ ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ ಎಂದು ಕೊಡುಗೈ ದಾನಿ ಸಾಯಿರಾಂ ಗೋಪಾಲಕೃಷ್ಣ ಭಟ್ ಕಿಳಿಂಗಾರ್ ಹೇಳಿದರು. ಅವರು ಅವರ ನಿವಾಸದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಹಾಗೂ ಕೈರಳಿ ಪ್ರಕಾಶನ ಸುಬ್ಬಯ್ಯಕಟ್ಟೆ ಜಂಟಿ ಆಶ್ರಯದಲ್ಲಿ ನ.೨೩ರಂದು ಕಾಸರಗೋಡು ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ ಜರಗಲಿರುವ ಗಡಿನಾಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಜಾನಪದ ಪರಿಷತ್ತು ಕರಳ ಗಡಿನಾಡ ಘಟಕದ ಸದಸ್ಯೆ ಪುಷ್ಪಾವತಿ ನೆಟ್ಟಣಿಗೆ ಅಕಾಡೆಮಿ ಸದಸ್ಯೆ ಉಮಾವತಿ, ಆಶಾ, ಅಕಾಡಮಿ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಸದಸ್ಯೆ ಜಯಂತಿ ಅಡೂರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *