Header Ads
Header Ads
Header Ads
Breaking News

ಪಂಡಿತ್ ರೆಸಾರ್ಟ್‌ನಲ್ಲಿ ಅಂಗಾಂಗ ದಾನದ ಜಾಗೃತಿ ಮೂಡಬಿದರೆಯ ಆಲಂಗಾರನಲ್ಲಿರುವ ಪಂಡಿತ್ ಹೆಲ್ತ್ ರೆಸಾರ್ಟ್ ಯೆನೆಪೋಯ ಮೆಡಿಕಲ್ ಕಾಲೇಜ್, ಮಥುರಾ ರೋಟರಿ ಕ್ಲಬ್ ಸಹಯೋಗ

ಮೂಡುಬಿದಿರೆ : ಆರ್ಗನ್ ಡೊನೇಶನ್ ಇಂಡಿಯಾ ಫೌಂಡೇಶನ್ ಸಂಸ್ಥೆಯು ಮೂಡುಬಿದಿರೆಯ ಆಲಂಗಾರಿನಲ್ಲಿರುವ ಪಂಡಿತ್ ಹೆಲ್ತ್ ರೆಸಾರ್ಟ್‌ನಲ್ಲಿ ಮಂಗಳೂರಿನ ಯೆನೆಪೋಯ ಮೆಡಿಕಲ್ ಕಾಲೇಜು, ಮೂಡುಬಿದಿರೆ ಮತ್ತು ಮಥುರಾ ರೋಟರಿ ಕ್ಲಬ್ ಇವುಗಳ ಸಹಭಾಗಿತ್ವದಲ್ಲಿ ಅಂಗಾಂಗ ದಾನದ ಕುರಿತು ಜಾಗೃತಿ ಕಾರ್ಯಕ್ರಮವು ನಡೆಯಿತು.

ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಅಂಗಾಂಗ ದಾನವು ಮಾಡುವುದರಿಂದ ಇನ್ನೊಂದು ಜೀವವು ಬದುಕಲು ಸಹಾಕಾರಿಯಾಗುತ್ತದೆ. ಮನುಷ್ಯನ ದೇಹದಲ್ಲಿರಯುವ ಪ್ರತಿಯೊಂದು ಅಂಗವು ಬಹಳ ಪ್ರಾಮುಖ್ಯವಾದುದು. ಓರ್ವ ಮನುಷ್ಯನ ಅಂಗಗಳಿಂದ 8 ಜನರನ್ನು ಬದುಕಿಸಲು ಸಾಧ್ಯವಿದೆ. ಕೊನೆ ಗಳಿಗೆಯಲ್ಲಿ ನಮ್ಮ ದೇಹವು ಮಣ್ಣು ಸೇರುವುದಕ್ಕಿಂತ ಇನ್ನೊಂದು ಜೀವಕ್ಕೆ ಉಪಯೋಗವಾಗುವುದು ಒಳಿತು ಎಂದು ಹೇಳಿದರು.

ಶಾಸಕ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಪರೋಪಕಾರ ಮನೋಭಾವ ನಮ್ಮಲ್ಲಿರಬೇಕು. ನಮ್ಮಿಂದ ಇನ್ನೊಂದು ಜೀವವನ್ನು ಉಳಿಸುವಂತಹ ಕಾರ್ಯಗಳು ನಡೆಯಬೇಕು ಎಂದ ಅವರು ತಾನು ಕೂಡಾ ತನ್ನ ಅಂಗಾಂಗವನ್ನು ದಾನ ಮಾಡುತ್ತೇನೆಂದು ಘೋಷಿಸಿದರು.  ಪಂಡಿತ್ ರೆಸಾರ್ಟ್‌ನ ಚೀಫ್ ಪ್ರಮೋಟರ್ ಲಾಲ್ ಗೋಯೆಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಂತೋಷ್ ಪೈ, ಯೆನೆಪೋಯ ಆಸ್ಪತ್ರೆಯ ಡಾ. ಮುಜಿಬಲ್ ರೆಹಮಾನ್ ಅವರು ಅಂಗಾಂಗ ದಾನದ ಮಹತ್ವವನ್ನು ತಿಳಿಸಿದರು. ದೀಪಕ್ ಗೋಯೆಲ್-ಆಶಾ ಗೋಯೆಲ್ ಅವರು ಸ್ವಾಮೀಜಿಯನ್ನು ಗೌರವಿಸಿದರು.

ಯೆನೆಪೋಯ ವಿವಿಯ ಅಬ್ದುಲ್ಲಾ ಕುಂಞ, ವಿಧಾನ ಪರಿಷತ್ ಸದಸ್ಯ, ಗಣೇಶ್ ಕಾರ್ಣಿಕ್, ಬಿಜೆಪಿ ಮುಖಂಡ ಕೆ.ಪಿ ಜಗದೀಶ ಅಧಿಕಾರಿ, ಇನ್ನರ್‌ವೀಲ್ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ, ಮೂಡುಬಿದಿರೆ ರೋಟರಿ ಅಧ್ಯಕ್ಷ ಶ್ರೀಕಾಂತ್ ಕಾಮತ್, ಇನ್‌ಕಂಟ್ಯಾಕ್ಸ್ ಅಧಿಕಾರಿ ಮಿಶ್ರಾ, ಎಸ್.ಪಿ ಅಮಿತ್ ಕುಮಾರ್, ಡಾ.ವೇದಮೂರ್ತಿ ಸಾಂದರ್ಭಿಕವಾಗಿ ಮಾತನಾಡಿದರು.. ಚೇರ್ ಪರ್ಸನ್ ರೂಬಿ ಅಗರ್‌ವಾಲ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.

Related posts

Leave a Reply