Header Ads
Header Ads
Breaking News

ಪಂಪ್‌ವೆಲ್ ಫ್ಲೈಓವರ್ ಪೂರ್ಣಗೊಳಿಸಲು ಗಡುವಿನ ಮೇಲೆ ಗಡುವು : ಇನ್ನೂ ಚುರುಕು ಪಡೆದುಕೊಳ್ಳದ ಪಂಪ್‌ವೆಲ್ ಫ್ಲೈಓವರ್‌ಗೆ ಕಾಮಗಾರಿ

ಪಂಪ್‌ವೆಲ್ ಫ್ಲೈ ಓವರ್‌ಗೆ ಪೂರ್ಣಗೊಳಿಸಲು ಗಡುವಿನ ಮೇಲೆ ಗಡುವು ಸಿಗುತ್ತಿರುವ ಸಂದರ್ಭದಲ್ಲಿ ಇನ್ನೊಂದು ಗಡುವು ಸಿಕ್ಕಿದೆ. ಈ ವರ್ಷಾಂತ್ಯದೊಳಗೆ ಕೆಲಸ ಮುಗಿಸಿ, ಎಂದು ಸಂಸದರು ಹೇಳಿದ್ರು. ನವಯುಗ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ ಕೂಡ ಕೊಟ್ರು. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವೇ.? ಇಲ್ಲಿದೆ ಈ ಬಗ್ಗೆ ಒಂದು ಇಂಟ್ರಸ್ಟಿಂಗ್ ಸ್ಟೋರಿ…….

ಹೌದ ಇರುವ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲು ಸಾಧ್ಯವೇ.? ಎನ್ನುವುದು ಸಾರ್ವಜನಿಕ ವಲಯದಲ್ಲಿರುವ ಯಕ್ಷಪ್ರಶ್ನೆ. ಈಗಲೂ ಬೆರಳೆಣಿಕೆ ಕಾರ್ಮಿಕರು, ಒಂದೆರಡು ಜೆಸಿಬಿ ಹಾಗೂ ಟಿಪ್ಪರ್, ಕ್ರೇನ್‌ಗಳು ಫ್ಲೈಓವರ್‌ನ ಎರಡೂ ಬದಿ ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ. ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ಗಮನಿಸಿದರೆ ಪಂಪ್‌ವೆಲ್ ಫ್ಲೈ ಓವರ್ ಕಾಮಗಾರಿಗೆ ಇನ್ನೂ ಚುರುಕು ಪಡೆದಂತೆ ಕಾಣುತ್ತಿಲ್ಲ. ಒಟ್ಟು 600 ಮೀ. ಉದ್ದ ಹಾಗೂ 20 ಮೀ. ಅಗಲದ ಪಂಪ್‌ವೆಲ್ ಫ್ಲೈ ಓವರ್ ನಿರ್ಮಾಣ ಕಾಮಗಾರಿಗೆ 2010ರಲ್ಲಿ ಚಾಲನೆ ನೀಡಲಾಗಿತ್ತು. ಆದರೆ, ರಾಜಕೀಯ, ತಾಂತ್ರಿಕ, ಆರ್ಥಿಕ ಮೊದಲಾದ ಕಾರಣಗಳಿಂದ ಆರು ವರ್ಷ ಕಾಮಗಾರಿ ಪ್ರಗತಿಯನ್ನೇ ಕಂಡಿರಲಿಲ್ಲ. 2016ರಲ್ಲಿ ಕಾಮಗಾರಿ ಚುರುಕು ಪಡೆಯಿತಾದರೂ ಮತ್ತೆ ಕುಂಟುತ್ತ ಸಾಗಿದ್ದು. ಇದು ಜನರಿಂದ ತೀವ್ರ ಆಕ್ರೋಶ, ಟೀಕೆ, ಪ್ರತಿಭಟನೆಗಳಿಗೆ ಕಾರಣವಾಗಿದೆ. ಪಂಪ್‌ವೆಲ್ ಫ್ಲೈ ಓವರ್ ಕಾಮಗಾರಿ ಮುಗಿಸಲು ಜಿಲ್ಲಾಡಳಿತ- ಸಂಸದರು ಹಲವು ಡೆಡ್‌ಲೈನ್ ನೀಡಿದರೂ ಕೆಲಸ ಮಾತ್ರ ಕುಂಟಿತ್ತಲೇ ಸಾಗುತ್ತಿದ್ದು. ಜನರು ದಿನಾ ಪರದಾಡುವಂತಾಗಿದೆ.

ಮಳೆ ಕಡಿಮೆಯಾಯಿತೆಂದು ಕೆಲಸ ಆರಂಭಿಸಲಾಗಿದೆ. ಆದರೆ ಮಧ್ಯಾಹ್ನ ಬಳಿಕ ಮಳೆಯಾಗುತ್ತಿದ್ದು, ದಿನವಿಡೀ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ವರ್ಷಾಂತ್ಯದಲ್ಲಿ ಕೆಲಸ ಪೂರ್ಣಗೊಳಿಸಲು ಎಲ್ಲ ಪ್ರಯತ್ನ ಮಾಡುತ್ತೇವೆ. ಎಲ್ಲ ಕೆಲಸಗಾರರನ್ನು ಪಂಪ್‌ವೆಲ್‌ಗೆ ಕರೆಸಲಾಗಿದ್ದು, ಕಾಮಗಾರಿ ವೇಗ ಪಡೆಯುತ್ತಿದೆ ಎನ್ನುತ್ತಾರೆ ಸ್ಥಳದಲ್ಲಿರುವ ಸಂಸ್ಥೆಯ ಇಂಜಿನಿಯರ್‌ಗಳು.ಪಂಪ್‌ವೆಲ್ ಫ್ಲೈ ಓವರ್ ಕೆಲಸ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಗುತ್ತಿಗೆ ಸಂಸ್ಥೆಯವರಿಗೆ ಸೂಚನೆ ನೀಡಲಾಗಿದೆ. ಆದರೆ ಮತ್ತೆ ಮಳೆ ಅಡ್ಡಿ ಉಂಟುಮಾಡುತ್ತಿದೆ.ಈ ವರ್ಷಾಂತ್ಯದಲ್ಲಾಗದೇ ಮುಂದಿನ ವರ್ಷಾಂತ್ಯದಲ್ಲಾದರೂ ಕಾಮಗಾರಿ ಪೂರ್ಣಗೊಳ್ಳುತ್ತದೋ ಎನ್ನುವುದು ಕಾಡುವ ಪ್ರಶ್ನೆಯಾಗಿದೆ.

Related posts

Leave a Reply

Your email address will not be published. Required fields are marked *