Header Ads
Header Ads
Breaking News

ಪಚ್ಚಂಬಳದಲ್ಲಿ ಜನರ ನಿದ್ದೆ ಕೆಡಿಸಿದ್ದ ಕಾಡು ಬೆಕ್ಕು ಹುಲಿಯೆಂದು ಆತಂಕದಲ್ಲಿದ್ದ ಜನತೆ ಕಾಡು ಬೆಕ್ಕಿನ ಹೆಜ್ಜೆಯ ಗುರುತೆಂದು ಅರಣ್ಯ ಪಾಲಕರು ಮಾಹಿತಿ

ಮಂಜೇಶ್ವರ: ಪಚ್ಚಂಬಳ ಪರಿಸರದಲ್ಲಿ ಹುಲಿಗಳು ಪ್ರತ್ಯಕ್ಷಗೊಂಡಿರುವುದಾಗಿ ನಾಗರಿಕರು ಭೀತಿಯಿಂದ ಕಾಲವನ್ನು ಕಳೆಯುತ್ತರುವ ಮಧ್ಯೆ ಅದು ಹುಲಿಯ ಹೆಜ್ಜೆ ಅಲ್ಲ ಕಾಡು ಬೆಕ್ಕಿನ ಹೆಜ್ಜೆಯ ಗುರುತು ಎಂದು ಅರಣ್ಯ ಪಾಲಕರು ಮಾಹಿತಿ ನೀಡಿದ್ದಾರೆ.ಕೆಲ ದಿನಗಳ ಹಿಂದೆ ಪಚ್ಚಂಬಳ ಕ್ವಾರ್ಟರ್ಸ್‌ನಲ್ಲಿ ವಾಸಿಸುವವರು ಹುಲಿಗಳನ್ನು ಕಂಡಿರುವುದಾಗಿ ಹೇಳಿಕೆಯನ್ನು ನೀಡಿದ್ದರು.

ಈ ಬಗ್ಗೆ ಮಾಹಿತಿ ಲಭಿಸಿದ ಪೊಲೀಸರು ಶೋಧ ತೀವೃ ಗೊಳಿಸಿರುವ ಮಧ್ಯೆ ಪಚ್ಚಂಬಳದ ಕಾಡು ಪ್ರದೇಶದಿಂದ ಒಂದು ದೊಡ್ಡ ಹುಲಿ, ಮತ್ತೆರಡು ಮರಿಗಳು ಬಂದಿದ್ದು, ಇಲ್ಲಿನ ಕ್ವಾರ್ಟರ್ಸ್ ಸಮೀಪದಲ್ಲಾಗಿ ಹಾದು ಹೋಗಿರುವುದಾಗಿ ನೀಡಿದ ಹೇಳಿಕೆ ಅರಣ್ಯ ಪಾಲಕರನ್ನು ಹಾಗೂ ಪೊಲೀಸರ ನಿದ್ದೆಯನ್ನು ಕೆಡಿಸಿತ್ತು. ಕ್ವಾರ್ಟರ್ಸ್ ನಿವಾಸಿಗಳು ಎರಡು ರಾತ್ರಿ ಹುಲಿಗಳನ್ನು ಕಂಡು ಇತರರಿಗೆ ವಿಷಯ ತಿಳಿಸಿದ್ದರು. ಬಳಿಕ ಸಿ ಸಿ ಕ್ಯಾಮರಾದಲ್ಲೂ ಹುಲಿಯೊಂದರ ರೀತಿಯ ಪ್ರಾಣಿ ಸಾಗುತ್ತಿರುವುದು ಕಂಡು ಬಂದಿತ್ತು.. ಇಲ್ಲಿಂದ ಹುಲಿಗಳದ್ದೆಂದು ಅಂದಾಜಿಸಲಾದ ಹೆಜ್ಜೆ ಗುರುತುಗಳನ್ನು ಪತ್ತೆಹಚ್ಚಲಾಗಿರುವುದಾಗಿ ಪೊಲೀಸರು ತಿಳಿಸಿದ ಬೆನ್ನಿಗೇ ನಾಗರಿಕರು ತೀವ್ರ ಭೀತಿಗೀಡಾಗಿದ್ದರು. ಈ ಸಂದರ್ಭ ಬೆಳಿಗ್ಗೆ ಮದ್ರಸಾಗಳಿಗೆ ಹೋಗಿದ್ದ ಮಕ್ಕಳನ್ನು ಮನೆಯವರು ಕರೆದುಕೊಂಡು ಬಂಬರುತ್ತಿರುವ ದೃಶ್ಯ ಕಂಡು ಬರುತಿತ್ತು.ತಿಂಗಳುಗಳ ಹಿಂದೆ ಉಳುವಾರು ಅರಣ್ಯ ಪ್ರದೇಶದಲ್ಲೂ, ಕುಂಬಳೆ ಮಾಟೆಂಗುಳಿ ಮೊದಲಾದೆಡೆ ಹುಲಿಗಳು ಕಂಡು ಬಂದಿರುವುದಾಗಿ ಹೇಳಲಾಗುತಿತ್ತು. ಅಲ್ಲದೆ ಮಾಟೆಂಗುಳಿ ಸಮೀಪ ಸಿ.ಎಚ್.ಸಿ ರೋಡ್‌ನಲ್ಲಿರವ ಮಸೀದಿಯ ಸಿ.ಸಿ. ಕ್ಯಾಮರಾದಲ್ಲಿ ಹುಲಿಗಳ ದೃಶ್ಯ ಪತ್ತೆಯಾಗಿರುವ ಬಗ್ಗೆಯೂ ವರದಿಯಾಗಿತ್ತು. ಆದರೆ ಇದೆಲ್ಲವನ್ನೂ ಅಲ್ಲಗೆಳೆದ ಅರಣ್ಯ ಪಾಲಕರು ಇದೀಗ ಶಾಸ್ತ್ರೀಯ ಪರಿಶೋಧಣೆಯಲ್ಲಿ ಪಚ್ಚಂಬಳ ಪರಿಸರದಲ್ಲಿ ಪತ್ತೆಯಾದ ಹೆಜ್ಜೆಗುರುತು ಕಾಡು ಬೆಕ್ಕಿನದ್ದಾಗಿರುವುದಾಗಿಯೂ ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲವೆಂಬುದಾಗಿ ತಿಳಿಸಿದ್ದಾರೆ.

Related posts

Leave a Reply