
ಹರೇಕಳ-ಅಡ್ಯಾರ್ ಸೇತುವೆ ನಿರ್ಮಾಣ ಬಳಿಕ ಕೇಂದ್ರ ಸ್ಥಾನ ಆಗಲಿರುವ ನಾಲ್ಕು ಗ್ರಾಮಗಳ ಸಂಗಮ ಗ್ರಾಮಚಾವಡಿ ಜಂಕ್ಷನ್ ಮುಖ್ಯರಸ್ತೆಗಳ ಮಾದರಿಯಲ್ಲೇ ಅಭಿವೃದ್ಧಿಪಡಿಸಿ ನಗರ ಸ್ವರೂಪಕ್ಕೆ ತರಲಾಗುವುದು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಅವರು 50 ಲಕ್ಷ ಅನುದಾನದಲ್ಲಿ ಪಜೀರ್-ಹರೇಕಳ ಮುಖ್ಯರಸ್ತೆ ಗ್ರಾಮಚಾವಡಿ ಜಂಕ್ಷನ್ ರಸ್ತೆ ಅಗಲೀಕರಣ ಮತ್ತು ಡಾಂಬರು ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.ಗ್ರಾಮೀಣ ಭಾಗದಿಂದ ದೂರದ ನಗರ ಪ್ರದೇಶಕ್ಕೆ ಪ್ರಯಾಣಿಸುವವರು ಯಾವುದೇ ಅಡಚಣೆಯಿಲ್ಲದಂತೆ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ಇದೀಗ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಎರಡನೇ ಹಂತದಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ, ಉಪಾಧ್ಯಕ್ಷೆ ಕಲ್ಯಾಣಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಹರೇಕಳ ಪಂಚಾಯಿತಿ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಹರೇಕಳ, ಮತ್ತಿತರರು ಉಪಸ್ಥಿತರಿದ್ದರು.