

ಕಾರ್ಕಳ : ಪಡುತಿರುಪತಿ ಖ್ಯಾತಿಯ ವೆಂಕಟರಮಣ ದೇವಸ್ಥಾನದ ವರ್ಷಂಪ್ರತಿ ನಡೆಯುವ ದೀಪೋತ್ಸವ ಕಾರ್ಯಕ್ರಮವು ಕರೋನಾದ ನಿಮಿತ್ತ ಈ ಬಾರಿ ಸರಳ ರೀತಿಯಲ್ಲಿ ಅಚರಿಸಲಾಯಿತು.ದೇವರು ಪಲ್ಲಂಕಿಯ ಮೂಲಕ ರಥಬೀದಿಯಿಂದ ಬೆಳ್ಳಗ್ಗೆ ಹೊರಟು ಭುವನೇಂದ್ರ ಕಾಲೇಜಿನ ಸಮೀಪದಲ್ಲಿ ರುವ ವನದಲ್ಲಿ ಕುಳಿತು ಬಳಿಕ ಪ್ರಸಾದ ವಿತರಿಸಲಾಯಿತು.ದೀಪೋತ್ಸವ ಸಂದರ್ಭದಲ್ಲಿ ದೇವಸ್ಥಾನದಿಂದ ಅನಂತಶಯನದವರೆಗೆ ರಸ್ತೆ ಬದಿಯಲ್ ಗುರ್ಜಿ ಅಳವಡಿಸಲಾಗುತ್ತಿದ್ದು ಈ ಎಲ್ಲಾ ಗುರ್ಜಿ ಕಟ್ಟೆಗೆ ದೇವರು ಕುಳಿತು ಸೇವಕರಿಗೆ ಪ್ರಸಾದ ನೀಡುತ್ರಿರುವುದು ವಾಡಿಕೆಯಾಗಿತ್ತು ಅದರೆ ಈ ಬಾರಿ ಗುರ್ಜಿ ಸೇವೆ ಇಲ್ಲದೇ ಸರಳ ರೀತಿಯಲ್ಲಿ ದೀಪೋತ್ಸವ ಅಚರಿಸಲಾಯಿತು.