Header Ads
Breaking News

ಪಡುಬಿದ್ರಿಯಲ್ಲಿ ಗದ್ದೆ ಪ್ರದೇಶಕ್ಕೆ ಕಿಡಿಗೇಡಿಗಳಿಂದ ಬೆಂಕಿ

ಪಡುಬಿದ್ರಿ-ಎರ್ಮಾಳು ಗಡಿ ಪ್ರದೇಶದಲ್ಲಿರುವ ಸೇತುವೆಯ ಸಮೀಪದ ಗದ್ದೆ ಪ್ರದೇಶದ ಮುಳ್ಳು ಪೊದೆಗಳಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಸ್ಥಳದಲ್ಲಿದ್ದ ಬಾರೀ ಮರಗಿಡಗಳು ಬೆಂಕಿಗಾಹುತಿಯಾಗಿದೆ. ಇನ್ನು ಬೆಂಕಿ ನಂದಿಸಲು ಯುಪಿಸಿಎಲ್ ಅಗ್ನಿಶಾಮಕ ವಾಹನಕ್ಕೆ ಕರೆ ಮಾಡಿದರೂ ಅವರು ಬರಲು ನಿರಾಕರಿಸಿದ್ದಾರೆ ಎಂದು ಸ್ಥಳಕ್ಕೆ ಆಗಮಿಸಿದ ಪಡುಬಿದ್ರಿ ಪೊಲೀಸರು ಅಸಮಾದಾನ ವ್ಯಕ್ತ ಪಡಿಸಿದ್ದಾರೆ.

ಪ್ರತೀ ವರ್ಷವೂ ಈ ಭಾಗದಲ್ಲಿ ಆಕಸ್ಮಿಕ ಬೆಂಕಿ ಅವಘಢ ನಡೆಯುತ್ತಿದ್ದು, ಆದರೆ ಅದರ ಮೂಲ ಕೆದಕಿದಾಗ ಆ ಜಾಗದ ಮಾಲಕರೇ ಖರ್ಚಿಲ್ಲದೆ ತಮ್ಮ ಜಾಗವನ್ನು ಶುದ್ಧೀಕರಿಸಲು ಈ ದಾರಿ ಹಿಡಿಯುತ್ತಿದ್ದಾರೆ ಎಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಇಂದು ಬೆಂಕಿ ಅವಘಢ ನಡೆದ ಪ್ರದೇಶ ವಾಸದ ಮನೆಗಳಿಗೆ ದೂರವಿದ್ದರೂ ಮರಗಳಲ್ಲಿ ವಾಸವಿದ್ದ ಹಕ್ಕಿ-ಗಿಡುಗ-ನವಿಲುಗಳು ತಮ್ಮ ವಾಸಸ್ಥಾನ ಸಹಿತ ತಮ್ಮ ಮರಿಗಳನ್ನು ಕಳೆದುಕೊಂಡು ಬೊಬ್ಬಿಡುತ್ತಾ ಹಾರಾಡುತ್ತಿರುವುದು ಕಂಡು ಬಂದಿದೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

Leave a Reply

Your email address will not be published. Required fields are marked *