Header Ads
Breaking News

ಪಡುಬಿದ್ರಿಯಲ್ಲಿ ಮುಗಿಯದ ಗೋಳು ಹೆದ್ದಾರಿ ಟ್ರಾಫಿಕ್ ಜಾಂ : ಒಂದು ಗಂಟೆಗೂ ಅಧಿಕ ಕಾಲ ಹೆದ್ದಾರಿ ಬ್ಲಾಕ್

ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಸೇತುವೆ ಬಳಿಯ ಹೆದ್ದಾರಿ ಅವ್ಯವಸ್ಥೆಯಿಂದಾಗಿ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಂ ದಿನನಿತ್ಯದ ಕಿರಿಕಿರಿಯಾಗಿ ಪರಿಣಮಿಸಿದೆ. ನಿನ್ನೆ ರಾತ್ರಿಯ ವೇಳೆ ಕೂಡ ಒಂದು ತಾಸಿಗೂ ಅಧಿಕ ಹೊತ್ತು ಹೆದ್ದಾರಿ ಬ್ಲಾಕ್ ಆಗಿ ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ. ಚತುಷ್ಪಥ ಕಾಮಗಾರಿ ಅರೆಬರೆಯಾಗಿ ನಡೆದಿರುವುದೇ ಈ ರಾದ್ದಾಂತಕ್ಕೆ ಕಾರಣ ಎಂಬುದು ಕಳೆದ ಹತ್ತು ವರ್ಷಗಳಿಂದಲೂ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಸಹಿತ ಜನ ಸಾಮಾನ್ಯರಿಗೂ ತಿಳಿದ ವಿಚಾರವೇ ಆಗಿದೆ. ದಶಕ ಸಂದರೂ ಇನ್ನೂ ಮುಗಿಯದ ಕಿರು ಸೇತುವೆ ಕಾಮಗಾರಿಯಿಂದಾಗಿ ತಾತ್ಕಾಲಿಕ ಎಂಬಂತೆ ನಿರ್ಮಿಸಿದ ರಸ್ತೆ ಇದೀಗ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಯಾವುದೋ ಗುಡ್ಡಕಾಡಿನ ರಸ್ತೆಯನ್ನು ನೆನಪಿಸುತ್ತಿದೆ. ಮುಂದಿನ ಹದಿನೈದು ದಿನದೊಳಗೆ ಈ ರಾದ್ದಾಂತಕ್ಕೆ ಕಾರಣವಾಗುತ್ತಿರುವ ಪಡುಬಿದ್ರಿ ಸೇತುವೆ ಭಾಗದ ರಸ್ತೆ ಸಂಪೂರ್ಣ ದುರಸ್ತಿಪಡಿಸದಿದ್ದಲ್ಲಿ ಸ್ಥಳೀಯ ಎಲ್ಲಾ ಸಂಘ- ಸಂಸ್ಥೆಗಳನ್ನು ಸೇರಿಸಿ ಹೆದ್ದಾರಿ ತಡೆ ಮಾಡಿ ಪ್ರತಿಭಟಿಸುವ ಎಚ್ಚರಿಕೆಯನ್ನು ಉಡುಪಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಗುತ್ತಿಗೆ ಕಂಪನಿ ನವಯುಗ್‍ಗೆ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *