Header Ads
Header Ads
Breaking News

ಪಡುಬಿದ್ರಿ ಗ್ರಾಮ ಪಂಚಾಯತ್ ಸಭೆಯಲ್ಲಿ ಪ್ರಶ್ನೆಗಳ ಪ್ರವಾಹ…! ಅಧಿಕಾರಿಗಳು ಸುಸ್ತೋ ಸುಸ್ತು..

ತ್ಯಾಜ್ಯ ನಿರ್ವಾಹಣೆಯಲ್ಲಿ ಎಡವಿದ್ದ ಪಡುಬಿದ್ರಿ ಗ್ರಾಮ ಪಂಚಾಯಿತಿಯ ವಿರುದ್ಧ ಗ್ರಾಮಸ್ಥರು ಪಡುಬಿದ್ರಿಯ ನಾರಾಯಣಗುರು ಸಭಾಂಗಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಪ್ರಶ್ನೆಗಳ ಪ್ರವಾಹವನ್ನೇ ಹರಿಸಿದ್ದು, ಗ್ರಾಮಸ್ಥರ ಪ್ರಶ್ನೆಗೆ ಹಾರಿಕೆ ಉತ್ತರ ನೀಡಲು ಯತ್ನಿಸಿದ ಜನಪ್ರತಿನಿಧಿಗಳು ಸಹಿತ ಅಧಿಕಾರಿಗಳು ಸುಸ್ತೋ ಸುಸ್ತು. ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಗ್ರಾ.ಪಂ. ಕಟ್ಟಡದ ಮುಂಭಾಗ ನಿರ್ಮಿಸಿದ ಎಸ್.ಎಲ್.ಆರ್ ತ್ಯಾಜ್ಯ ನಿರ್ವಾಹಣಾ ಘಟಕದ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ ಗ್ರಾಮಸ್ಥ ರಾಮಚಂದ್ರ ಆಚಾರ್ಯ, ಘಟಕ ನಿರ್ವಾಹಣೆ ಮಾಡುತ್ತಿರುವವರು ವಿಂಗಡಣೆ ಮಾಡಿದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮಾರಾಟ ಮಾಡುತ್ತೇವೆ ಎಂದಿದ್ದಾರಾದರೂ ಇದೀಗ ಅದನ್ನು ಫಲವತ್ತಾದ ಪ್ರದೇಶ ಗ್ರಾ.ಪಂ. ಮುಂಭಾಗದಲ್ಲೇ ಅಕ್ರಮವಾಗಿ ಜೆಸಿಬಿ ಯಂತ್ರದ ಮೂಲಕ ಗುಂಡಿತೋಡಿ ಹೂತು ಹಾಕುವ ಮೂಲಕ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ, ತಕ್ಷಣ ಈ ಎಸ್.ಎಲ್.ಆರ್ ಘಟಕವನ್ನು ತಕ್ಷಣವೇ ಮುಚ್ಚುವಂತ್ತೆ ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *