
ದೋಸ್ತಿಗಳ ಮಧ್ಯೆಯೇ ನಡೆದ ವಾಗ್ವಾದ ತಾರಕ್ಕೇರಿ ದಲಿತ ಯುವಕನೋರ್ವನ ಮುಖಕ್ಕೆ ಗಂಭೀರ ಹೊಡೆತ ನೀಡಿದ ಆರೋಪಿ ಯುವಕ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ.ಆರೋಪಿ ಯುವಕ ಅಡ್ವೆ ಮೂಲದವನಾಗಿದ್ದು, ಈತ ಪಡುಬಿದ್ರಿ ಮಾರುಕಟ್ಟೆ ರಸ್ತೆಯ ವೆಜ್ ಹೋಟೆಲೊಂದರಲ್ಲಿ ಕೆಲಸಕ್ಕಿದ್ದ ಅಜೇಯ, ಈತ ಹಾಗೂ ಹಲ್ಲೆಗೊಳಗಾದ ಯುವಕ ಆತ್ಮೀಯರಾಗಿಯೇ ಇದ್ದು, ನಾಗರಾಜ್ ಎಸ್ಟೇಟ್ ಬಳಿಯ ಬಾರ್ ಒಂದಕ್ಕೆ ವೆಜ್ ಹೋಟೆಲ್ ಮಾಲಿಕ ಇವರನ್ನು ಊಟಕ್ಕೆಂದು ಕೆರೆದುಕೊಂಡು ಹೋಗಿದ್ದರು, ಊಟ ಪೊರೈಸಿದ ಇವರು ಹಲ್ಲೆಗೊಳಗಾದ ಪಾದೆಬೆಟ್ಟುವಿನ ಯುವಕ ಪ್ರಕಾಶ್ ಎಂಬವರನ್ನು ಬಾರಿನಲ್ಲೇ ಬಿಟ್ಟು ಇದೀಗ ನಿನ್ನನ್ನು ಕರೆದುಕೊಂಡು ಹೋಗುವುದಕ್ಕೆ ಬೈಕ್ ಹಿಡಿದುಕೊಂಡು ಬರುವುದಾಗಿ ಹೇಳಿದ್ದರು. ತದ ಬಳಿಕ ಗಂಟೆ ಒಂದಾದರೂ ಬಾರದ ಕಾರಣ ಅಜೇಯನಿಗೆ ಕರೆ ಮಾಡಿ ಪ್ರಶ್ನಿಸಿದ್ದಾನೆ, ಆಕ್ರೋಶ ಭರಿತನಾಗಿ ಮಾತನಾಡಿದಾಗ ಇಬ್ಬರ ಮಧ್ಯೆ ಮೊಬೈಲ್ನಲ್ಲಿ ವಾಗ್ವಾದ ನಡೆದಿದೆ. ಪ್ರಕಾಶ್ ಪಡುಬಿದ್ರಿ ಪೇಟೆಗೆ ಬರುತ್ತಿದಂತೆ ಬೈಕಿನಲ್ಲಿ ಪ್ರತ್ಯಕ್ಷನಾದ ಆರೋಪಿ ಜಾತಿ ನಿಂದನೆ ಸಹಿತ ಮಾಡಿ ತಾನು ಬಂದ ಬೈಕಿನ ಕೀಯನ್ನು ಮುಷ್ಠಿಯೋಳಗೆ ಇರಿಸಿ ನೇರವಾಗಿ ಮುಖಕ್ಕೆ ಹೊಡೆದಿದ್ದಾರೆ. ಗಂಭೀರ ಗಾಯಗೊಳಾದ ಅವರು ಈ ಘಟನೆ ತಿಳಿಯುತ್ತಿದಂತೆ ದಲಿತ ಮುಖಂಡರು ಆಸ್ಪತ್ರೆಗೆ ಆಗಮಿಸಿ ಆರೋಪಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ಪಡುಬಿದ್ರಿ ಪೊಲೀಸರು ಗಾಯಾಳುವಿನ ಹೇಳಿಕೆಯಂತ್ತೆ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಅಜೇಯನನ್ನು ವಶಕ್ಕೆ ಪಡೆದಿದ್ದಾರೆ.