Header Ads
Breaking News

ಪಡುಬಿದ್ರಿ ಬೆಂಗ್ರೆಯಲ್ಲಿ ಆರು ಮಂದಿಗೆ ಪಾಸಿಟಿವ್

ಎಲ್ಲಡೆ ಕೊರೊನಾ ಮಹಾಮಾರಿ ಬಹುಬೇಗನೆ ಹರಡ್ತಾ ಇದ್ದು, ಪಡುಬಿದ್ರೆ ಬೆಂಗ್ರೆಯಲ್ಲೂ ಇಂದು ಆರು ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಮುಂಬೈಯಿಂದ ಬಂದಿದ್ದ 8 ಮಂದಿಯ ಪೈಕಿ ಆರು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮುಂಬೈಯಿಂದ ಬಂದವರು ಹೋಮ್ ಕ್ವಾರಂಟೈನ್‍ಗೆ ಒಳಗಾಗಿದ್ರು. ಆದ್ರೆ ಕೆಲವು ಸ್ಥಳೀಯ ಯುವಕರು ಆ ಮನೆಗೆ ಭೇಟಿ ನೀಡಿದ್ರಿಂದ ಈ ಭಾಗದ ಜನತೆಗೆ ಕೊರೊನಾ ಆತಂಕ ಎದುರಾಗಿದೆ. ಇದೀಗ ಆ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಇನ್ನು ಪಡುಬಿದ್ರೆಯ ಎರ್ಮಾಳಿನಲ್ಲಿ ಇಬ್ಬರಿಗೆ ಹಾಗೂ ಹೆಜಮಾಡಿಯಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

Related posts

Leave a Reply

Your email address will not be published. Required fields are marked *