Header Ads
Breaking News

ಪಡುಬಿದ್ರಿ : ರಾತೋರಾತ್ರಿ ಕೊಳವೆಬಾವಿ ನಿರ್ಮಾಣಕ್ಕೆ ಯತ್ನ

ತೀವೃ ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿರುವ ಪಡುಬಿದ್ರಿ ಬೀಡು ಬಳಿ, ರಾತ್ರೋರಾತ್ರಿ ಗ್ರಾ.ಪಂ. ಅನುಮತಿ ನೀಡಿದೆ ಎಂದು ಹೇಳಿಕೊಂಡು ಕೊಳವೆಬಾವಿ ನಿರ್ಮಿಸಲು ಯತ್ನಿಸಿದ ತಂಡವೊಂದರ ಪ್ರಯತ್ನವನ್ನು ಗ್ರಾ.ಪಂ.ಸದಸ್ಯರು ಸಹಿತ ಸ್ಥಳೀಯರು ವಿಫಲಗೊಳಿಸಿದ ಘಟನೆ ತಡರಾತ್ರಿ ನಡೆದಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಕರುಣಾಕರ ಪೂಜಾರಿ, ಪಿಡಿಒ ಪಂಚಾಕ್ಷರೀ ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಆ ಭಾಗದ ಕೊಳವೆಬಾವಿ ನಿರ್ಮಾಣದ ಯೋಜನೆಯನ್ನು ಕೈಬಿಡಲಾಗಿದೆ ಎಂದಿದ್ದಾರೆ.

Related posts

Leave a Reply

Your email address will not be published. Required fields are marked *