Header Ads
Breaking News

ಪಡುಬಿದ್ರಿ ಸಂತೆ ಮಾರುಕಟ್ಟೆಗೆ ಪಿಡಿಒ ದಾಳಿ : ದಂಡ ವಿಧಿಸಿದ ಅಧಿಕಾರಿಗಳು

ಗ್ರಾ.ಪಂ.ನ ಹತ್ತಾರು ಬಾರಿಯ ಎಚ್ಚರಿಕೆಯ ಹೊರತಾಗಿಯೂ ಪ್ಲಾಸ್ಟಿಕ್ ಮಾರಾಟದಂಗಡಿ ಸಹಿತ ವಾರದ ಸಂತೆ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಕೈಚೀಲ ಬಳಸುತ್ತಿದ್ದ ವ್ಯಾಪಾರಿಗಳ ಪ್ಲಾಸ್ಟಿಕ್ ಕೈ ಚೀಲ ವಶಪಡಿಸಿಕೊಂಡಿದ್ದಲ್ಲದೆ ಸಾವಿರಾರು ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

ಕೆಲವೊಂದು ವ್ಯಾಪಾರಿಗಳು ದಂಡ ನೀಡಲು ನಿರಾಕರಿಸಿದಾಗ ಅವರ ತಕ್ಕಡಿಗಳನ್ನು ವಶಪಡಿಸಿಕೊಂಡ ಘಟನೆಯೂ ನಡೆಯಿತು, ಇದೇ ಸಂದರ್ಭ ಉಢಾಫೆಯಾಗಿ ವರ್ತಿಸಿದ ಕೆಲವೊಂದು ವ್ಯಾಪಾರಿಗಳಿಗೆ ಖಢಕ್‌ಕ್ಕಾಗಿ ಉತ್ತರಿಸಿದ ಪಿಡಿಓ ನಮ್ಮ ಗ್ರಾ.ಪಂ. ನಿರ್ಣಯ ನಿಮಗೆ ಸಮಸ್ಯೆಯಾಗುವುದಾದರೆ ಮುಂದಿನ ದಿನದಲ್ಲಿ ಇಲ್ಲಿಗೆ ವ್ಯಾಪಾರಕ್ಕೆ ಬರುವ ಅಗತ್ಯವಿಲ್ಲ ಎಂದರು.
ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಗ್ರಾಮ ಪಂಚಾಯಿತಿ ಪಿಡಿಓ ಪಂಚಾಕ್ಷರೀ ಸ್ವಾಮೀ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದಂತ್ತೆ ಜಿಲ್ಲಾಢಳಿತ ನೀಡಿದ ಸೂಚನೆಯಂತ್ತೆ ಕಳೆದ ಐದು ತಿಂಗಳಿಂದ ಪ್ಲಾಸ್ಟಿಕ್ ಕೈ ಚೀಲ ಬಳಸದಂತ್ತೆ ಎಚ್ಚರಿಕೆ ನೀಡಿದ್ದರೂ ಅದನ್ನು ನಿರ್ಲಕ್ಷಿಸಿ ಪ್ಲಾಸ್ಟಿಕ್ ಕೈಚೀಲ ಬಳಸುತ್ತಿದ್ದ ವ್ಯಾಪಾರಿಗಳಿಗೆ ದಂಡ ವಿಧಿಸಲಾಗಿದ್ದು, ಮತ್ತೆ ಇದೇ ಪುರಾವರ್ತನೆ ಆದಲ್ಲಿ ಅಂಥಹ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಗ್ರಾಮ ಪಂಚಾಯಿತ್ ಅವಕಾಶ ನೀಡುವುದಿಲ್ಲ, ಅದಲ್ಲದೆ ಬಹಳಷ್ಟು ಮೌಕಿಕ ಸಹಿತ ಲಿಖಿತ ಎಚ್ಚರಿಕೆಯ ಹೊರತಾಗಿಯೂ ಜಿಲ್ಲಾಢಳಿತದ ಆದೇಶ ಸಹಿತ ಗ್ರಾ.ಪಂ. ನಿರ್ಣಯದ ವಿರುದ್ಧ ಸಡ್ಡು ಹೊಡೆದು ಪ್ಲಾಸ್ಟಿಕ್ ಕೈಚೀಲಗಳ ವ್ಯಾಪಾರ ಮುಂದುವರಿಸಿದ್ದು, ಈ ಬಗ್ಗೆ ಜನರಿಂದಲೂ ಬಾರೀ ವಿರೋಧ ವ್ಯಕ್ತವಾಗಿದೆ, ಈ ನಿಟ್ಟಿನಲ್ಲಿ ಗ್ರಾ.ಪಂ. ಕಟ್ಟಡದಲ್ಲೇ ವ್ಯಾಪಾರ ನಡೆಸುತ್ತಿರುವ ಪ್ಲಾಸ್ಟಿಕ್ ಮಾರಾಟದಂಗಡಿಗೆ ಬೀಗ ಜಡಿಯಲಾಗುವುದು, ಇಷ್ಟರಲ್ಲೇ ಅಂಗಡಿಯಲ್ಲಿದ್ದ ಸಾಮಾಗ್ರಿಗಳನ್ನು ಖಾಲಿ ಮಾಡುವಂತ್ತೆ ಸೂಚನೆ ನೀಡಲಾಗಿದ್ದು ವಾರದೋಳಗೆ ಅಂಗಡಿ ಬೀಗ ಹಾಕಲಿದ್ದೇವೆ ಎಂದರು.

Related posts

Leave a Reply

Your email address will not be published. Required fields are marked *