Header Ads
Header Ads
Breaking News

ಪಡುಬಿದ್ರೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ, ಜಿಲ್ಲಾಡಳಿತ ಸಹಿತ ವಿವಿಧ ಇಲಾಖಾ ಸಹಯೋಗದೊಂದಿಗೆ ಪಡುಬಿದ್ರೆಯಲ್ಲಿ ವಿಶ್ವ ಪರಿಸರ ದಿನಾಚರಣೆ ನಡೆಯಿತು. ವೇದಿಕೆಯಲ್ಲಿ ಅತಿಥಿಗಳು ಪ್ಲಾಸ್ಟಿಕ್ ನಿಯಂತ್ರಣದ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿದರು. ಆದ್ರೆ ಇದೇ ಕಾರ್ಯಕ್ರಮದ ಊಟ- ಉಪಾಹಾರ ಹಂಚಿಕೆ ವೇಳೆ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಲಾಗದೇ ಪ್ಲಾಸ್ಟಿಕ್ ನಿಯಂತ್ರಣ ಕೇವಲ ಭಾಷಣಕ್ಕಷ್ಟೇ ಮೀಸಲು ಎಂಬಂತಾಗಿದೆ. 

ಶಾಲಾ ಮಕ್ಕಳನ್ನು ಬಳಸಿಕೊಂಡು ಮಾಡಲಾದ ಈ ಕಾರ್ಯಕ್ರಮ ಹೆಜಮಾಡಿಯಲ್ಲಿ ಗಿಡಗಳನ್ನು ನೆಡುವ ಮೂಲಕ ಆರಂಭಗೊಂಡಿತ್ತು, ಆ ಬಳಿಕ ಪರಿಸರ ಜಾಥ ಹೆಸರಲ್ಲಿ ಮಕ್ಕಳನ್ನು ಉಸಿ ಬಿಸಿಲಿನಲ್ಲಿ ಸುಮಾರು ನಾಲ್ಕು ಕೀ.ಮೀ. ನಡೆಸುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಆ ಬಳಿಕ ಪಡುಬಿದ್ರಿ ಬಂಟರ ಭವನದಲ್ಲಿ ನಡೆದ ಸಭಾ ಕಾರ್ಯಾಕ್ರಮದ ಮುನ್ನ ನಡೆದ ಉಪಹಾರದಲ್ಲಿ ಬೇಕಾಬಿಟ್ಟಿ ಪ್ಲಾಸ್ಟಿಕ್ ಲೋಟ ತಟ್ಟೆಗಳನ್ನು ಬಳಸುವ ಮೂಲಕ ಹಾಗೂ ವೇದಿಕೆಯನ್ನು ಕೂಡಾ ಪ್ಲಾಸ್ಟಿಕ್ ಕಟೌಟ್‌ಗಳಿಂದ ಅಲಂಕರಿಸುವ ಮೂಲಕ ಕಾರ್ಯಕ್ರಮ ಸಂಪೂರ್ಣ ಅರ್ಥ ಕಳೆದುಕೊಂಡಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Related posts

Leave a Reply

Your email address will not be published. Required fields are marked *