Header Ads
Breaking News

ಪಡುಬಿದ್ರೆ : ಮದ್ಯದಂಗಡಿ ತೆರೆಯುವ ಮುನ್ನವೇ ಮದ್ಯಪ್ರಿಯರ ಸಾಲು

ಪಡುಬಿದ್ರಿ: ಲಾಕ್ ಡೌನ್ ಸಡಿಲಿಕೆಯ ಹಿನ್ನಲೆಯಲ್ಲಿ ಮದ್ಯದಂಗಡಿ ತೆರೆದುಕೊಂಡಿಲ್ಲ ಆದರೆ ಅಷ್ಟರಲ್ಲೇ ಮದ್ಯಪ್ರಿಯರು ನೂರಾರು ಸಂಖ್ಯೆಯಲ್ಲಿ ವೈನ್ ಶಾಪ್ ಮುಂಭಾಗ ಜಮಾಯಿಸಿದ್ದಾರೆ.
ಮದ್ಯದಂಗಡಿ ಮುಂಭಾಗ ಸರತಿ ಸಾಲಿನಲ್ಲಿ ನಿಲ್ಲಲು ಕಳೆದ ದಿನವೇ ಪೂರಕ ವ್ಯವಸ್ಥೆ ಮಾಡ ಬೇಕಾಗಿದ್ದರೂ ಮಾಡದಿರುವುದರಿಂದ ಇಂದು ಇದೀಗ ತಡೆಗಳನ್ನು ಕಟ್ಟುವ ಕಾರ್ಯ ನಡೆಯುತ್ತಿದೆ. ಮದ್ಯದಂಗಡಿ ತೆರೆದುಕೊಂಡಿಲ್ಲ ಸಾಮಾಜಿಕ ಅಂತರ ಕಾಯಿದುಕೊಳ್ಳದ ಕೆಲ ಮದ್ಯಪ್ರಿಯರಿಗೆ ಮುಂಜಾನೆಯೆ ಪೊಲೀಸ್ ರು ಲಾಠಿ ರುಚಿ ತೋರಿಸಿದ್ದಾರೆ. ಬಿಸಿಲ ಧಗೆ ಕೊಂಚ ಕಡಿಮೆಯಾಗಿದ್ದರಿಂದ ಸರತಿ ಸಾಲಿನಲ್ಲಿ ಮೈಲುದ್ದ ನಿಂತವರಿಗೆ ಮೋಡ ಆಸರೆಯಾದಂತಾಗಿದೆ.

Related posts

Leave a Reply

Your email address will not be published. Required fields are marked *