Header Ads
Breaking News

ಪತ್ರಕರ್ತರಿಗೆ ಮಾನವೀಯತೆ ಅತ್ಯವಶ್ಯ : ಆಶಾ ಕೃಷ್ಣಸ್ವಾಮಿ

ಉಜಿರೆ : ಇಂದಿನ ತಂತ್ರಜ್ಞಾನ ಯುಗದಲ್ಲಿ ಪಠ್ಯಕ್ಕಿಂತ ಪ್ರಾಯೋಗಿಕ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದಾಗ ಮಾತ್ರ ಒಬ್ಬ ಉತ್ತಮ ಪತ್ರಕರ್ತನಾಗಲು ಸಾಧ್ಯ ಎಂದು ಸ್ವತಂತ್ರ್ಯ ಪತ್ರಕರ್ತೆ ಹಾಗೂ ಮಾಧ್ಯಮ ತರಬೇತಿಗಾರ್ತಿ ಆಶಾ ಕೃಷ್ಣಸ್ವಾಮಿ ಹೇಳಿದರು.ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಇತ್ತಿಚಿಗೆ ಆಯೋಜಿಸಿದ್ದ “ಪತ್ರಿಕೋದ್ಯಮದಲ್ಲಿನ ಪ್ರಸ್ತುತ ಪ್ರವೃತ್ತಿ” ಕುರಿತು ಉಪನ್ಯಾಸ ನೀಡುತ್ತಿದ್ದರು.

ಪತ್ರಕರ್ತನಾದವನಿಗೆ ಮಾನವೀಯತೆಯ ಮುಖ್ಯ ಜೊತೆಗೆ ಜನರ ನಿರೀಕ್ಷೆಗಳನ್ನು ಅರ್ಥೈಸಿಕೊಂಡು ಸಮಾಜ ಮುಖಿಯಾಗಿ ಕಾರ್ಯರ್ನಿವಹಿಸುವಂತಾಗ ಬೇಕು, ಬೇರೆ ಚಾನೆಲ್ ಮತ್ತು ಪತ್ರಿಕೆಗಳಿಗಿಂತ ವಿಭಿನ್ನ ರೀತಿಯಲ್ಲಿ ಸಂಪೂರ್ಣ ಮಾಹಿತಿಯನ್ನು ನಿಡಬೇಕು. ಪತ್ರಕರ್ತನಾಗ ಬಯಸುವವರು ಕೇವಲ ವರದಿಗೆ ಮಾತ್ರ ಸೀಮಿತವಾಗದೆ, ಫೋಟೋಗ್ರಫಿ, ವಿಡಿಯೋಗ್ರಫಿ, ಎಡಿಟಿಂಗ್ ಎಲ್ಲವನ್ನು ಕಲಿತು ಬಹುಮುಖಿಯಾಗಿರಬೇಕು ಎಂದು ಕಿವಿಮಾತು ಹೇಳಿದರು.

ಯಾವುದೇ ವರದಿ ಮಾಡುವಾಗ ಅದರ ಬಗ್ಗೆ ಸಂಪೂರ್ಣ ಸಾಕ್ಷಿ-ಆಧಾರಗಳನ್ನಿಟ್ಟುಕೊಂಡು ವರದಿ ಮಾಡುವುದು ಸೂಕ್ತ ಊಹಾಪೋಹದ ಮಾತುಗಳನ್ನ ನಂಬಿ ಯಾವತ್ತು ಮಾದ್ಯಮ ದಲ್ಲಿ ಪ್ರಸಾರ ಮಾಡಬಾರದು. ಎಂದ ಅವರು ವಿದ್ಯಾರ್ಥಿಗಳೊಂದಿಗೆ ತಮ್ಮ ರಾಜಕೀಯ ವರದಿಗಾರಿಕೆಯ ಸಂಬದಗಳನ್ನು ಹಂಚಿಕೊಂಡರು.ಪತ್ರಕರ್ತನಾದವನಿಗೆ ತಂತ್ರಜ್ಞಾನ ಹಾಗೂ ಭಾಷೆಯ ಮೇಲೆ ಹಿಡಿತವಿರಬೇಕು. ಸುದ್ದಿಯನ್ನು ಪ್ರಸ್ತುತ ಪಡಿಸುವಾಗ ತುಂಬಾ ಜಾಗೃತರಾಗಿರುವುದು ಅತ್ಯವಶ್ಯ ಎಂದರು. ಮಾದ್ಯಮದ ಯಾವುದೇ ವಿಬಾಗಳಲ್ಲಿ ಅನುವಾದ ಕಲೆಯಲ್ಲಿ ತುಂಬಾ ಪರಿಣತರಾಗಿರುವುದು ಅತ್ಯವಶ್ಯ ಎಂದು ವಿವರಿಸಿದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ್ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಭಾಗದ ಎಲ್ಲಾ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಮತ್ತು ವಿಬಾಗದ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಬೆಂಗಳೂರಿನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರೂಪಲ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಥಮ ಎಂ.ಸಿ.ಜೆ ವಿಂಧ್ಯಾ ಲಕ್ಷ್ಮೀ ನಿರೂಪಿಸಿ, ದಿನೇಶ್ ವಂದಿಸಿದರು.

Related posts

Leave a Reply

Your email address will not be published. Required fields are marked *