Header Ads
Header Ads
Header Ads
Breaking News

ಪರಿಸರ ಸ್ನೇಹಿ ಮಕರ ಸಂಕ್ರಾಂತಿ: ಶ್ರೀ ಗುಜರಾತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕಾರ್ಯಕ್ರಮ

ಶ್ರೀ ಗುಜರಾತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎ.ಪಿ.ಡಿ ಪೌಂಡೇಶನ್ ಸಹಯೋಗದೊಂದಿಗೆ ಪರಿಸರ ಸ್ನೇಹಿ ಮಕರ ಸಂಕ್ರಾಂತಿ ಹಬ್ಬವನ್ನು ವಿನೂತನವಾಗಿ ಆಚರಿಸಲಾಯಿತು.


ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸೌಮ್ಯ ಶೆಟ್ಟಿಗಾರ್ ಸ್ವಾಗತಿಸಿದರು. ಮುಖ್ಯೋಪಧ್ಯಾಯಿನಿ ಅಶ್ವಿನಿ ಶೆಣೈ ಎಳ್ಳುಬೆಲ್ಲ ನೀಡುವುದರೊಂದಿಗೆ ಭೂಮಿತಾಯಿ ವನ್ಯಜೀವಿಗಳು ಹಾಗೂ ಸಾಮಾನ್ಯ ಮನುಷ್ಯ ಇಂದು ತನ್ನ ಸಂರಕ್ಷಣೆಗಾಗಿ ನೀವೂ ಬದುಕಿ ನಮ್ಮನ್ನೂ ಬದುಕಲು ಬಿಡಿ ಎಂದು ಜನರಲ್ಲಿ ಮನವಿ ಮಾಡುತ್ತಿದ್ದೇನೆ ಎಂದರು.
ಬದುಕಿ ನಮ್ಮನ್ನೂ ಬದುಕಲು ಬಿಡಿ ಎಂಬುದನ್ನು ವಿದ್ಯಾರ್ಥಿಗಳು ನೃತ್ಯ ರೂಪಕದ ಮೂಲಕ ಪ್ರಸ್ತುತಪಡಿಸಿದರು. ಅಲ್ಲದೆ ಕರ್ನಾಟಕ, ಗುಜರಾತ್, ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿ ಆಚರಣೆಯ ಬಗ್ಗೆ ನೃತ್ಯ ರೂಪಕದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಶಾಲಾ ಶೈಕ್ಷಣಿಕ ಸಮಿತಿಯ ಸದಸ್ಯರಾದ ಕಲ್ಪೇಶ್ ಭಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಪ್ರತಿಭಾ ಕುಳಾಯಿ ಸಂದರ್ಬೋಚಿತವಾಗಿ ಮಾತನಾಡಿದರು. ಜಯಪ್ರಕಾಶ್ ಪರಿಸರ ಸಂರಕ್ಷಣೆಯ ಬಗ್ಗೆ ಮಕ್ಕಳನ್ನು ಎಚ್ಚರಿಸಿದರು. ಸ್ಥಳೀಯ ಕಾರ್ಪೊರೇಟರ್ ರಾಜೇಂದ್ರ ಕುಮಾರ್, ಮನಪಾ ಆರೋಗ್ಯ ಸಮಿತಿಯ ಅಧ್ಯಕ್ಷೆ ನಾಗವೇಣಿ, ಪ್ರಕಾಶ್ ಕುರೂಪ್, ಸಂತೋಷ್ ನಾಯರ್, ನವೀನ್ ಡಿಸೋಜಾ, ಆಶಾ ಉಪಸ್ಥಿತರಿದ್ದರು. ಕುಮಾರಿ ರುಹಿಯಾ ವಂದನಾರ್ಪಣೆಗೈದರು. ಇದೇ ವೇಳೆ ವಿದ್ಯಾರ್ಥಿಗಳು ಮಣ್ಣಗುಡ್ಡ ಪರಿಸರದಲ್ಲಿ ಸಾರ್ವಜನಿಕರಿಗೆ ಎಳ್ಳುಬೆಲ್ಲ ನೀಡಿ ಪರಿಸರ ಸಂರಕ್ಷಣೆ ಜಾಥಾವನ್ನು ಕೈಗೊಂಡರು.

Related posts

Leave a Reply