Header Ads
Header Ads
Breaking News

ಪವಿತ್ರ ರಂಜಾನ್ ಹಬ್ಬದಂದು ಮಾನಸಿಕ ಅಸ್ವಸ್ಥ ಮುಸ್ಲಿಂ ಯುವಕನ ರಕ್ಷಣೆ

ಸಾರ್ವಜನಿಕ ವಲಯದಲ್ಲಿ ಕಳೆದ ಒಂದು ವರ್ಷಗಳಿಂದ ಭೀತಿಯ ವಾತಾವರಣ ಸೃಷ್ಠಿಸಿದ ಮಾನಸಿಕ ಅಸ್ವಸ್ಥ ಯುವಕನನ್ನು ವಶಕ್ಕೆ ಪಡೆದು ಮಲ್ಪೆ ಠಾಣೆಯ ಸಹಕಾರದೊಂದಿಗೆ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಮಂಜೇಶ್ವರದ ಶ್ರೀಸಾಯಿ ಸೇವಾಶ್ರಮದಲ್ಲಿ ಸುರಕ್ಷಿತ ನೆಲೆಕಲ್ಪಿಸಿದ್ದಾರೆ. ವಿಶು ಶೆಟ್ಟಿ ಅವರ ಸಮಯಪ್ರಜ್ಞೆಯಿಂದ ಕೊನೆಗೂ ಭಯದ ವಾತಾವರಣಕ್ಕೆ ತೆರೆಬಿದ್ದಂತಾಗಿದ್ದು ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಇಂದು ಆದಿಉಡುಪಿಯಲ್ಲಿ ಯುವಕನು ಕಂಡು ಬಂದಾಗ, ಆತನ ವಶಕ್ಕೆ ಪಡೆದ ವಿಶು ಶೆಟ್ಟಿ ಅವರು, ಯುವಕನ ಸ್ನಾನ ಮಾಡಿಸಿ, ಬದಲಿ ಬಟ್ಟೆ ತೊಡಿಸಿ, ಉಪಹಾರದ ವ್ಯವಸ್ಥೆಗೊಳಿಸಿದ್ದಾರೆ. ವಿಶು ಶೆಟ್ಟಿ ಅವರು ಮಂಜೇಶ್ವರದ ಶ್ರೀಸಾಯಿ ಸೇವಾಶ್ರಮದ ಸಂಚಾಲಕರಾದ ಡಾ.ಉದಯ್ ಕುಮಾರ್ ಭಟ್ ಅವರನ್ನು ಸಂಪರ್ಕಿಸಿ ಯುವಕನ ದಯನೀಯ ಸ್ಥಿತಿ ವಿವರಿಸಿ, ಯುವಕನಿಗೆ ಆಶ್ರಯ ಕಲ್ಪಿಸುವಂತೆ ವಿನಂತಿಸಿದ್ದಾರೆ. ಸ್ಪಂದಿಸಿದ ಆಶ್ರಮ ಸಂಚಾಲಕರು ಇಲಾಖೆಯ ಕಾನೂನು ಪ್ರಕ್ರಿಯೆ ನೆಡೆಸಿ ಕರೆತರುವಂತೆ ಹೇಳಿದ್ದಾರೆ. ಮಲ್ಪೆ ಪೋಲಿಸ್ ಠಾಣೆಯ ವಿನಂತಿ ಪತ್ರದ ಜೊತೆ ಠಾಣೆಯ ಪೇದೆ ಗುರುಲಿಂಗಪ್ಪ ಅವರ ಉಪಸ್ಥಿತಿಯಲ್ಲಿ ವಿಶು ಶೆಟ್ಟಿ ಅವರು ಯುವಕನನ್ನು ತಮ್ಮದೆ ವಾಹನದಲ್ಲಿ ಮಂಜೇಶ್ವರಕ್ಕೆ ಸಾಗಿಸಿ, ಆಶ್ರಮದ ದಾಖಲು ಪ್ರಕ್ರಿಯೆ ನಡೆಸಿ ದಾಖಲಿಸಿದ್ದಾರೆ. ಯುವಕನ ರಕ್ಷಣಾ ಕಾರ್ಯಚರಣೆಯಲ್ಲಿ ಸಮಾಜಸೇವಕ ತಾರಾನಾಥ್ ಮೇಸ್ತ ಶಿರೂರು, ಶಿವಾನಂದ ಮೂಡಬೆಟ್ಟು ಅವರು ಸಹಕರಿಸಿದ್ದಾರೆ. ನಿವೃತ್ತ ಬ್ಯಾಂಕ್ ಉದ್ಯೋಗಿ ಸತೀಶ್ ಶೆಟ್ಟಿ ಅಂಬಲಪಾಡಿ ಅವರು ಆಶ್ರಮಕ್ಕೆ 5ಸಾವಿರ ದೆಣಿಗೆ ನೀಡಿದ್ದಾರೆ. ರಂಜಾನ್ ಹಬ್ಬದ ಸಂಭ್ರಮದಲ್ಲಿ ಮುಸ್ಲಿಂ ಯುವಕನ ರಕ್ಷಿಸಿದ ಸಮಾಜಸೇವಕರ ಸೇವೆಗೆ ನಾಗರಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Related posts

Leave a Reply

Your email address will not be published. Required fields are marked *