Header Ads
Breaking News

ಪಾಂಗಾಳದಲ್ಲಿ ಡಿವೈಡರ್ ಏರಿದ ಕಾರು; ಕಾರು ಸ್ಕೂಟರ್ ಗೆ ಢಿಕ್ಕಿ, ಸವಾರ ಮೃತ್ಯು

ರಾಷ್ಟ್ರೀಯ ಹೆದ್ದಾರಿಯ ರಸ್ತೆ ವಿಭಜಕವೇರಿದ ಕಾರೊಂದು ಸ್ಕೂಟರ್‍ಗೆ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿ ಸಮೀಪದ ಪಾಂಗಾಳ ಎಂಬಲ್ಲಿ ಸಂಭವಿಸಿದೆ.

 

ಮೃತರು ಉದ್ಯಾವರ ಕಟ್ಟೆ ಗುಡ್ಡೆ ನಿವಾಸಿ ಸುಧಾಕರ್ (55) ವೃತ್ತಿಯಲ್ಲಿ ಪೈಂಟರ್ ಆಗಿದ್ದ ಇವರು ಕಾಪು ಕಡೆಗೆ ಸ್ಕೂಟರ್ ಏರಿ ಬರುತ್ತಿದ್ದ ಸಂದರ್ಭ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗವಾಗಿ ಬರುತ್ತಿದ್ದ ಇನೋವ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕವೇರಿ, ಮತ್ತೊಂದು ಪಾಶ್ವದಲ್ಲಿ ಬರುತ್ತಿದ್ದ ಸ್ಕೂಟರ್ ಗೆ ಡಿಕ್ಕಿಯಾಗಿ ತಗ್ಗಿಗೆ ಮುಗುಚಿ ಬಿದ್ದಿದೆ, ಕಾರಿನ ದಾಳಿಗೆ ತುತ್ತಾದ ಸ್ಕೂಟರ್ ಸವಾರ ಸ್ಥಳದಲ್ಲೆ ಮೃತ ಪಟ್ಟಿದ್ದಾರೆ. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Related posts

Leave a Reply

Your email address will not be published. Required fields are marked *