Header Ads
Breaking News

ಪಾದೆಬೆಟ್ಟುವಿನಲ್ಲಿ ಕೊರಗ ಕುಟುಂಬಗಳ 18 ಮನೆಗಳು ವಾಸಕ್ಕೆ ಮುಕ್ತ : ಲಾಲಾಜಿ ಮೆಂಡನ್ ಅವರಿಂದ ಚಾಲನೆ

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಪಾದೆಬೆಟ್ಟು ಕೊರಗ ಕಾಲನಿಯಲ್ಲಿ ಮುಂದಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸುವ ಹಾಗೂ ಮನೆಗಳ ಬಾಕಿ ಕಾಮಗಾರಿಗೆ ಶಾಸಕರ ನಿಧಿಯಿಂದ ರೂ.3ಲಕ್ಷ ಅನುದಾನ ನೀಡುವುದಾಗಿ ಶಾಸಕ ಲಾಲಾಜಿ ಅರ್ ಮೆಂಡನ್ ಭರವಸೆ ನೀಡಿದರು.

ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಸುಪರ್ದಿಯಲ್ಲಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿಯಲ್ಲಿ 18ಕೊರಗ ಕುಟುಂಬಗಳ ಸದಸ್ಯರ ಸ್ವಂತ ಪರಿಶ್ರಮದಿಂದಲೇ ಪಾದೆಬೆಟ್ಟು ಗ್ರಾಮದಲ್ಲಿ ರಚಿತವಾದ 18 ಮನೆಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು, ಕೊರಗರ ಅಭಿವೃದ್ಧಿಗಾಗಿ ಸರ್ಕಾರದ ಇನ್ನಷ್ಟು ಸವಲತ್ತುಗಳನ್ನು ಒದಗಿಸಿಕೊಡಲು ತಾನು ಬದ್ಧನಿದ್ದೇನೆ ಎಂದು ಹೇಳಿದರು.

ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ಪಾದೆಬೆಟ್ಟು ಗ್ರಾಮದಲ್ಲಿ ಉತ್ತಮ ರೀತಿಯಲ್ಲಿ ಕೊರಗರ ಕಾಲನಿ ನಿರ್ಮಾಣವಾಗಿದ್ದು, ಮುಂದಿನ ಮಳೆಗಾಲದಲ್ಲಿ ಇಲ್ಲಿ ಗಿಡಗಳನ್ನು ನೆಡಲಾಗುವುದು. ಈ ಸಮಯದಲ್ಲಿ ಕಾಲನಿಗೆ ನಾಮಕರಣವನ್ನು ಮಾಡಲಾಗುವುದು. ಸಮುದಾಯ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಐಟಿಡಿಪಿ ಅಧಿಕಾರಿಗೆ ಸೂಚನೆ ನೀಡಿದರು.

ಲೋಕೋಪಯೋಗಿ ಇಲಾಖೆಯ ಮೂಲಕ ರೂ.7.32ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಂಕ್ರೀಟೀಕೃತ ರಸ್ತೆ ಹಾಗೂ ಐಟಿಡಿಪಿ ಮೂಲಕ ರೂ. 15ಲಕ್ಷ ರೂ. ಅನುದಾನದೊಂದಿಗೆ ಕಾರ್ಯಗತವಾಗಿರುವ ಕುಡಿಯುವ ನೀರಿನ ಸೌಲಭ್ಯವನ್ನು ಲಾಲಾಜಿ ಉದ್ಘಾಟಿಸಿದರು.ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಐಟಿಡಿಪಿ ಯೋಜನಾಧಿಕಾರಿ ಲಲಿತಾ ಬಾಯಿ, ನಿವೃತ್ತ ಅಧ್ಯಾಪಕ ಚಂದ್ರಶೇಖರ ರಾವ್, ಕೊರಗ ಕಲಾ ವೇದಿಕೆಯ ಗಣೇಶ್ ಬಾರ್ಕೂರು, ಪ್ರಕಾಶ್ ಗುರಿಕಾರ್, ಕೊರಗರ ಈ 18 ಮನೆಗಳ ನಿರ್ಮಾಣದ ಹಿಂದಿನ ಶಕ್ತಿ, ಸ್ನಾತಕೋತ್ತರ ಪದವೀಧರೆ ಶ್ರೀಮತಿ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಶಶಿಕಾಂತ ಪಡುಬಿದ್ರಿ, ಗೀತಾಂಜಲಿ ಸುವರ್ಣ, ತಾಪಂ ಅಧ್ಯಕ್ಷೆ ನೀತಾಗುರುರಾಜ್, ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ಅಮೀನ್,ಸದಸ್ಯೆ ಚುಮ್ಮಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *