Header Ads
Breaking News

ಪಾಸಿಟಿವ್ ಆದ ಮೂರು ದಿನದಲ್ಲಿ ಸಾಯುತ್ತಾರೆ ಮಂಗಳೂರಿನಲ್ಲಿ ಜನರ ಜೀವಕ್ಕೆ ಬೆಲೆ ಇಲ್ವಾ : ಯು.ಟಿ. ಖಾದರ್ ಹೇಳಿಕೆ

ಕೊರೊನಾದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲಾಡಳಿತ, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು.ಪಾಸಿಟಿವ್ ಆದ ಮೂರು ದಿನದಲ್ಲಿ ಸಾಯುತ್ತಾರೆ.ಮಂಗಳೂರಿನಲ್ಲಿ ಜನರ ಜೀವಕ್ಕೆ ಬೆಲೆ ಇಲ್ವಾ, ಜಿಲ್ಲಾಡಳಿತ ಇದನ್ನು ತಮಾಷೆಯಾಗಿ ತೆಗೆದುಕೊಳ್ಳಬಾರದು. ಜನರು ಸಾವಿಗೀಡಾಗಿರೋದಕ್ಕೆ ಕಾರಣ ಏನು? ಎಂದು ಶಾಸಕ ಯು.ಟಿ. ಖಾದರ್ ಪ್ರಶ್ನಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇದನ್ನು ಆರೋಗ್ಯ ಇಲಾಖೆ ತನಿಖೆ ಮಾಡಲಿ. ಒಬ್ಬ ಸೋಂಕಿತ ಸತ್ತರೆ 150 ಜನರಿಗೆ ಸೋಂಕು ತಗಲುತ್ತದೆ. ಇದು ವೈದ್ಯಕೀಯ ಅಧ್ಯಯನದಿಂದ ಧೃಡಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೊರೊನಾ ಮೂಲವನ್ನೇ ಪತ್ತೆ ಹಚ್ಚಲು ಆಗಿಲ್ಲ. ಯಾವುದೇ ವಿಚಾರದಲ್ಲೂ ಜಿಲ್ಲಾಡಳಿತದಲ್ಲಿ ಸ್ಪಷ್ಟತೆ ಇಲ್ಲ. ಜನರಿಗೆ ಕಿಟ್ ಕೊಟ್ರೆ ವೈರಸ್ ಹೋಗೋದಿಲ್ಲ. ವೈರಸ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ದ.ಕ ಜಿಲ್ಲಾಡಳಿತದ ವಿರುದ್ಧ ಶಾಸಕ ಯು.ಟಿ ಖಾದರ್ ಆರೋಪ ಮಾಡಿದ್ದರು.

Related posts

Leave a Reply

Your email address will not be published. Required fields are marked *