Header Ads
Breaking News

ಪಿಂಗಾರ ಸಿನಿಮಾಕ್ಕೆ ‘ಅಂತರಾಷ್ಟ್ರೀಯ ಸ್ಪೆಷಲ್ ಜ್ಯೂರಿ ಅವಾರ್ಡ್’

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2020 ರಲ್ಲಿ ಪಿಂಗಾರ ಸಿನಿಮಾಕ್ಕೆ ವಿಶೇಷ ಪುರಸ್ಕಾರ ದೊರೆತಿದ್ದು, ಕನ್ನಡ ಮತ್ತು ತುಳು ಭಾಷೆಯ ಹೆಮ್ಮೆಯ ಸಿನಿಮಾವೆನಿಸಿಕೊಂಡಿದೆ. ಪ್ರೀತಮ್ ಶೆಟ್ಟಿ ಆಕ್ಷನ್ ಕಟ್ ಹೇಳಿ, ಅವಿನಾಶ್ ಶೆಟ್ಟಿ ನಿರ್ಮಾಣ ಮಾಡಿರೋ ಪಿಂಗಾರ ಸಿನಿಮಾ ತುಳುನಾಡಿನ ಸಂಸ್ಕೃತಿ, ಆ ಪ್ರದೇಶದ ಸೊಗಡು ಇವೆಲ್ಲವನ್ನೂ ಗಮನಿಸಿ ಚಿತ್ರೋತ್ಸವದಲ್ಲಿ ಈ ಸಿನಿಮಾಕ್ಕೆ “ ಅಂತರಾಷ್ಟ್ರೀಯ ಸ್ಪೆಷಲ್ ಜ್ಯೂರಿ ಅವಾರ್ಡ್ ” ವಿಶೇಷ ಗೌರವಕ್ಕೆ ಭಾಜನವಾಗಿದೆ.

ಬೆಂಗಳೂರಿನಲ್ಲಿ ಫೆಬ್ರವರಿ 26ರಿಂದ ಮಾರ್ಚ್ 4ರ ವರೆಗೆ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡು ವಿಭಾಗಗಳಲ್ಲಿ ತುಳುವಿನ ಪಿಂಗಾ ಸಿನಿಮಾ ಆಯ್ಕೆಯಾಗುವ ಮೂಲಕ ಒಂದು ಹೊಸ ಸಾಧನೆ ಮಾಡಿದೆ. ಮಾತ್ರವಲ್ಲದೆ ತುಳುವಿನ ಸಾಂಸ್ಕøತಿಕ ಶ್ರೀಮಂತಿಕೆಯ ಮಹತ್ವವನ್ನು ಸಾಭೀತು ಮಾಡಿದೆ. ಕನ್ನಡ ಚಲನಚಿತ್ರ ಸ್ಪರ್ಧೆ ವಿಭಾಗ ಮತ್ತು ಭಾರತೀಯ ಚಲನಚಿತ್ರ ಸ್ಪರ್ಧೆ ವಿಭಾಗದಲ್ಲಿ ಆಯ್ಕೆಯಾಗಿರುವ ಮೊದಲ ತುಳು ಚಿತ್ರ ಎಂಬ ಕೀರ್ತಿಗೂ ಪಿಂಗಾರ ಭಾಜನವಾಗಿದೆ.

ಇದು ಗುರುಪುರದ ಆರ್. ಪ್ರೀತಮ್ ಶೆಟ್ಟಿ ಎಂಬ ಉತ್ಸಾಹಿ ಯುವಕನ ನಿರ್ದೇಶನದ ಸಿನಿಮಾ. ಅವಿನಾಶ್ ಯು. ಶೆಟ್ಟಿ ಮತ್ತು ಡಿ.ಎನ್. ಮಂಜುನಾಥ್ ಶೆಟ್ಟಿ ಅವರು ಇದನ್ನು ನಿರ್ಮಾಣ ಮಾಡಿದ್ದಾರೆ. ಇದರಲ್ಲಿ 1960ರಿಂದ 2019ರ ವರೆಗೆ ತುಳುನಾಡಿನಲ್ಲಿ ಆಗಿರುವ ಬದಲಾವಣೆಯ ಚಿತ್ರಣಗಳಿವೆ. ಬೀಡಿ ಉದ್ಯಮ, ಉಳುವವನೇ ಹೊಲದೊಡೆಯ ಮುಂತಾದವುಗಳೆಲ್ಲಾ ತುಳುನಾಡಿನ ಮೇಲೆ ಎಂಥ ಪರಿಣಾಮ ಬೀರಿದೆ, ದೈವದ ಕಾರಣಿಕ ಮುಂತಾದವುಗಳೆಲ್ಲ ಇವೆ.

ಈ ಸಿನಿಮಾದಲ್ಲಿ ನೀಮಾ ರೈ, ಶರಣ್ ಶೆಟ್ಟಿ, ಉಷಾ ಭಂಡಾರಿ, ಗುರು ಹೆಗ್ಡೆ, ವಿ4 ನ್ಯೂಸ್ ಸಿಪಿಎಲ್ ಖ್ಯಾತಿಯ ತೆಲಿಕೆದ ತೆನಾಲಿ ತಂಡದ ಸುನೀಲ್ ನೆಲ್ಲಿಗುಡ್ಡೆ, ಸಿಂಚನಾ ಚಂದ್ರ ಮೋಹನ್, ಪ್ರಶಾಂತ್ ಸಿ.ಕೆ. ಮೊದಲಾದವರು ನಟಿಸಿದ್ದಾರೆ. ಶಶಿರಾಜ್ ಕಾವೂರು ಅವರ ಸಂಭಾಷಣೆ ಹೊಂದಿರುವ ಸಿನಿಮಾಕ್ಕೆ ಮೈಮ್ ರಾಮ್‍ದಾಸ್ ಹಾಗೂ ಶೀನಾ ನಾಡೋಲಿ ಅವರ ಸಾಹಿತ್ಯವಿದೆ. ಛಾಯಾಗ್ರಹಣದಲ್ಲಿ ವಿ. ಪವನ್ ಕುಮಾರ್ ಸಹಕರಿಸಿದ್ದು, ಗಣೇಶ್ ನೀರ್ಚಾಲ್ ಮತ್ತು ಶೇಷಾಚಲ ಕುಲಕರ್ಣಿ ಅವರ ಸಂಕಲನವಿದೆ.

ಈ ಸಿನಿಮಾದಲ್ಲಿ ತನಿಯ ಎಂಬಾತನ ಮೈಯಲ್ಲಿ ದೈವ ಆವಾಹನೆಯಾಗಿ, ಸತ್ಯವನ್ನೇ ನುಡಿಯುತ್ತದೆ. ಇದರಿಂದ ಮೇಲ್ವರ್ಗದ ವ್ಯಕ್ತಿಗಳು ಕಸಿವಿಸಿಕೊಳ್ಳುತ್ತಾರೆ. ಪ್ರತಿಷ್ಟೇ ಮತ್ತು ಜಾತಿ ತಾರತಮ್ಯದ ಅಮಾನವೀಯ ಘಟನೆಗಳು ಚಲಾವಣೆಯಲಿದ್ದು, ಸಮಾಜಿಕ ನ್ಯಾಯ ಕಾಣೆಯಾಗಿದೆ ಎಂದ ಅಂಶಗಳು ಈ ಮೂಲಕ ಬಹಿರಂಗವಾಗುತ್ತವೆ.

ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳನ್ನು ನಿರ್ದೇಶಿಸಿರೋ ಪ್ರೀತಮ್ ಶೆಟ್ಟಿಯವರು ಈ ಸಿನಿಮಾಕ್ಕೆ ಈ ಗೌರವ ಬಂದಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದು, ಮತ್ತಷ್ಟು ಒಳ್ಳೆ ಪ್ರಯತ್ನಗಳಿಗೆ ಪುಷ್ಟಿಕೊಟ್ಟಿದೆ ಅನ್ನುತ್ತಾರೆ. ಚಿತ್ರಕ್ಕೆ ಕ್ಯಾಮೆರಾ ಕೈಚಳಕ ತೋರಿರೋ ಪವನ್ ಕುಮಾರ್ ಅವರ ಕೆಲಸ ಪ್ರತಿ ಪ್ರೇಮ್ ಗೋಚರಿಸುತ್ತೆ. ಕ್ಯಾಮರಾ ವರ್ಕ್ ಚಂದನವನದಲ್ಲಿ ಮತ್ತಷ್ಟು ಅವಕಾಶಗಳನ್ನು ಒದಗಿಸಿಕೊಡೊದ್ರಲ್ಲಿ ಯಾವುದೇ ಸಂಶಯವಿಲ್ಲ. ಕರಾವಳಿಯ ಭೂತಾರಾಧನೆ ಮತ್ತು ತುಳು ಸಂಸ್ಕೃತಿಯ ಮೂಲ ಕಥೆ ಹೊಂದಿರೋ ಈ ಸಿನಿಮಾಕ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಂತರಾಷ್ಟ್ರೀಯ ಸ್ಪೆಷಲ್ ಜ್ಯೂರಿ ಅವಾರ್ಡ್ ಲಭಿಸಿರುವುದು ಖುಷಿಯ ವಿಚಾರ.

Related posts

Leave a Reply

Your email address will not be published. Required fields are marked *