Header Ads
Breaking News

ಪಿಯು ಫಲಿತಾಂಶದಲ್ಲಿ ಉಡುಪಿ ಪ್ರಥಮ: ವಿದ್ಯಾರ್ಥಿಗಳಿಗೆ ಸಚಿವೆ ಜಯಮಾಲಾ ಅಭಿನಂದನೆ

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನದ ಸಾಧನೆಗೈದಿರುವುದು ತನಗೆ ಸಂತಸ ತಂದಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಹೇಳಿದ್ದಾ

ಈ ಶೈಕ್ಷಣಿಕ ಗರಿಮೆ ಕೈಗೂಡುವಲ್ಲಿ ಉಡುಪಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳ ಪರಿಶ್ರಮವನ್ನು ನಾನು ಪ್ರಶಂಸಿಸುತ್ತೇನೆ. ಉಡುಪಿ ಜಿಲ್ಲೆಯು ಮೊದಲಿನಿಂದಲೂ ಶೈಕ್ಷಣಿಕ ಸಾಧನೆಗೆ ಹೆಸರುವಾಸಿಯಾಗಿದೆ. ಈ ಹಿರಿಮೆಯನ್ನು ಮುಂದೆಯೂ ಕಾಪಾಡಿಕೊಂಡು ಹೋಗುವಲ್ಲಿ ಯಶಸ್ವಿಯಾಗಲಿ ಎಂದು ನಾನು ಆಶಿಸುತ್ತೇನೆ ಎಂದವರು ಹಾರೈಸಿದ್ದಾರೆ.

Related posts

Leave a Reply

Your email address will not be published. Required fields are marked *