Header Ads
Header Ads
Breaking News

ಪುತ್ತೂರಿನಲ್ಲಿ ಅಭಿನಂದನಾ ಸಮಾರಂಭ .ಶಾಸಕ ಸಂಜೀವ ಮಠಂದೂರು, ಬೋಜೇ ಗೌಡರಿಗೆ ಅಭಿನಂದನೆ.

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಮತ್ತು ಸಹ ಸಂಸ್ಥೆಗಳ ಸಹಯೋಗದಲ್ಲಿ ಪುತ್ತೂರಿನ ನೂತನ ಶಾಸಕ ಸಂಜೀವ ಮಠಂದೂರು ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಎಸ್.ಎಲ್.ಬೋಜೇ ಗೌಡರಿಗೆ ಸಾರ್ವಜನಿಕವಾಗಿ ಅಭಿನಂದನಾ ಕಾರ್ಯಕ್ರಮ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.ಜನಸಮುದಾಯ ಜನಪ್ರತಿನಿಧಿಗಳ ಜೊತೆ ಇರಬೇಕು:ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಅಧ್ಯಕ್ಷತೆ ವಹಿಸಿ ಅಭಿನಂದನಾ ಭಾಷಣ ಮಾಡಿದರು. ಇವತ್ತು ಒಬ್ಬ ನಮ್ಮ ಸಮಾಜಯ ವ್ಯಕ್ತಿ ಪುತ್ತೂರಿನ ಶಾಸಕರಾಗಿದ್ದಾರೆ. ಅವರು ಪುತ್ತೂರಿನ ಜನತೆಗೆ ಶಾಸಕರು ಆದ ಕಾರಣ ಎಲ್ಲರನ್ನು ಒಂದೇ ದೃಷ್ಟಿಯಿಂದ ನೋಡಬೇಕಾದ ವಿಶೇಷ ಜವಾಬ್ದಾರಿ ಅವರಲ್ಲಿದೆ. ಸಣ್ಣಪುಟ್ಟ ವ್ಯತ್ಯಾಸ ಆದರೆ ಅವರು ನಮ್ಮ ಮನೆ ಹುಡುಗ ಎಂದು ನೇರವಾಗಿ ಸಂಪರ್ಕಿಸಬೇಕು. ಜನಸಮುದಾಯ ಜನಪ್ರತಿನಿಧಿಗಳ ಜೊತೆ ಇರಬೇಕು ಎಂದು ಅವರು ಹೇಳಿದರು. ಸಂಜೀವ ಮಠಂದೂರು ಮತ್ತು ಬೋಜೇ ಗೌಡರಿಗೆ ರಾಜಕೀಯ ಹೊಸತಲ್ಲ. ರಾಜಕೀಯ ಒತ್ತಡಗಳ ಮಧ್ಯೆ ಸಣ್ಣಪುಟ್ಟ ವ್ಯತ್ಯಾಸ ಆದರೆ ಸರಿಪಡಿಸಿಕೊಳ್ಳಬೇಕಾದ್ದು ಅವರ ಜವಾಬ್ದಾರಿ ಆದರೆ ಅದನ್ನು ಸರಿ ಮಾಡಿಸುವಂತೆ ನೋಡಿಕೊಳ್ಳುವುದು ಸಮುದಾಯದ ಜವಾಬ್ದಾರಿ ಎಂದ ಅವರು ರಾಜಕಾರಣ ನಿಂತ ನೀರಲ್ಲ. ಅದರ ಒಳಗೆ ಹಳೆ ನೀರು ಹೋಗಿ ಹೊಸ ನೀರು ಬರುವಂತೆ, ಒಳಗೆ ಹೊರಗೆ ನೋಡುವ ಸಂದರ್ಭದಲ್ಲಿ ಹಳೆ ನೀರು ಹೋಗಿ ಹೊಸ ನೀರು ಬರುತ್ತೆ. ಕೊಳಚೆಯನ್ನು ಶುದ್ದಿಕರಣ ಮಾಡುವಲ್ಲಿ ಜನಪ್ರತಿನಿಧಿಗಳೊಂದಿಗೆ ಜನ ಸಮುದಾಯದ ಸಹಕಾರ ಅಗತ್ಯವಾಗಿರಬೇಕು. ಪಕ್ಷದ ಜೊತೆ ಅತ್ಯಂತ ಪ್ರಾಮಾಣಿಕವಾಗಿ ಸಿನ್ಸಿಯಾರಿಟಿಯಾಗಿ ನಿಜವಾದ ಅರ್ಥ ಕೊಡಬಲ್ಲ ಸಂಜೀವ ಮಠಂದೂರು ಇವತ್ತು ಶಾಸಕ ಸ್ಥಾನಕ್ಕೆ ಸಮುದಾಯ ಅವಕಾಶ ಮಾಡಿಕೊಟ್ಟಿದೆ. ಅವರ ೫ ವರ್ಷದಲ್ಲಿ ದ.ಕ.ಜಿಲ್ಲೆಗೆ ಮಾತ್ರವಲ್ಲ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಎಲ್ಲಾ ಸಮಾಜದ ಬಾಂದವರ ಪ್ರೀತಿ ವಾತ್ಸಲ್ಯ ಹೊಂದಿರುವ ಕೀರ್ತಿ ಅವರಿಗೆ ಬರಬೇಕು. ಇದಕ್ಕಾಗಿ ಸಮುದಾದಯದ ಸಹಕಾರ ಅಗತ್ಯವಾಗಿ ಬೇಕು ಎಂದರು. ಬಿಜೆಪಿಯಲ್ಲಿ ಸುಮಾರು ೩೫ ಆಡಳಿತಾತ್ಮಕ ಜಿಲ್ಲೆಯ ಅಧ್ಯಕ್ಷರ ಪೈಕಿ ಸಂಜೀವ ಮಠಂದೂರು ಅವರ ಕೊಡುಗೆ ಅದ್ಭುತವಾಗಿದೆ. ಅವರಿಗೆ ಇವತ್ತು ನಾವು ಅಭನಂದನೆ ಸಲ್ಲಿಸಿದ ಬಳಿಕ ಮುಂದಿನ ನಾಲ್ಕು ವರ್ಷದಲ್ಲಿ ಅವರು ಮಾಡಿದ ಕೆಲಸವನ್ನು ನೋಡಿ ಭಾರಿ ದೊಡ್ಡ ರೀತಿಯಲ್ಲಿ ಅಭಿನಂದನೆ ಸಲ್ಲಿಸಬೇಕು ಎಂದರು. ಅದೇ ರೀತಿ ಒಬ್ಬ ವ್ಯಕ್ತಿ ತನ್ನ ಪಕ್ಷದ ಅಸ್ತಿತ್ವ ಇಲ್ಲದ ಜಾಗದಲ್ಲಿ ತನ್ನ ಸ್ವಂತ ಶಕ್ತಿಯಿಂದ ಎದುರಾಲಿಯನ್ನು ಮೆಟ್ಟಿ ನಿಂತಿರುವ ಬೋಜೇ ಗೌಡರನ್ನು ನಾವು ಗೌರವಿಸಲೇ ಬೇಕು. ಅವರು ಕರ್ನಾಟಕ ಬಾರ್ ಅಸೋಸಿಯೇಶನ್‌ಗೂ ಪುನರಾಯ್ಕೆಗೊಂಡಿರುವುದು ಸಂತೋಷದ ವಿಚಾರ ಎಂದರು. ಸಮಾಜದ ಶಹಬಾಸ್‌ಗಿರಿಯಿಂದ ಮೂಲ ಸಮುದಾಯಕ್ಕೆ ಗೌರವ:ಒಬ್ಬ ವ್ಯಕ್ತಿಯ ಅರ್ಹತೆಯನ್ನು ಅಲಿಯುವುದು ಆತನನ್ನು ಹತ್ತು ಸಮಾಜದ ಮಧ್ಯೆ ಹಾಕಬೇಕು. ಅಲ್ಲಿ ಸಿಗುವ ಶಹಬಾಸ್‌ಗಿರಿ ಮೂಲ ಸಮುದಾಯಕ್ಕೆ ಗೌರವ ತಂದುಕೊಟ್ಟಂತೆ. ಈ ನಿಟ್ಟಿನಲ್ಲಿ ಸಂಜೀವ ಮಠಂದೂರು ಅವರು ಸುಮಾರು ೧೯ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸಿರುವುದು ಸಮುದಾಯಕ್ಕೆ ಸಿಕ್ಕಿದ ಗೌರವ ಎಂದು ಡಿ.ವಿ.ಸದಾನಂದ ಗೌಡ ಹೇಳಿದರು. ಜನರ್ದಾನ ಸೇವೆಯನ್ನು ಜನ, ಜಗತ್ತು ಮೆಚ್ಚುವಂತಾಗಬೇಕು:ಶ್ರೀ ಆದಿಚುಂಚನಗಿರಿ ಮಠದ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಸಮಾಜದ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ: ಅಭಿನಂದನಾ ಸನ್ಮಾನ ಸ್ವೀಕರಿಸಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಇವ ನಮ್ಮವ, ನಮ್ಮ ಮನೆಯ ಮಗ ಎಂದು ಸ್ವೀಕಾರ ಮಾಡಿದ ಕಾರಣ ಹಾಗೂ ನಿಮ್ಮ ಹೊಮ್ಮನಸ್ಸಿನಿಂದ ಜನರ ಸೇವೆ ಮಾಡಲು ಪ್ರೇರಣೆ ಕೊಟ್ಟಿದೆ. ಮಂಗಳೂರು, ವಿಟ್ಲ, ಬೆಳ್ತಂಗಡಿ, ಸುಳ್ಯದ ಗೌಡ ಸಮಾಜ ನಮ್ಮ ಸಮಾಜದ ಹುಡುಗ ಮುಂದೆ ಬರಬೇಕೆಂದು ಶ್ರಮಿಸಿದ್ದಾರೆ. ಇದಕ್ಕೆ ಸರಿಯಾಗಿ ಸಮಾಜದ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಗೌಡ ಸಮಾಜ ಸಾತ್ವಿಕ ಸಮಾಜ. ಇದು ನಾಯಕತ್ವಕ್ಕಾಗಿ ಪೈಪೋಟಿ ನೀಡಿದ ಸಮಾಜ ಅಲ್ಲ. ಸ್ವಾಭಿಮಾನದಿಂದ ಬದುಕಿದ ಸಮಾಜ. ಸಮಾಜದ ಡಿ.ವಿ.ಸದಾನಂದ ಗೌಡ, ಕೂಜುಗೋಡು ವೆಂಕಟ್ರಮಣ ಗೌಡ, ಸುಬ್ರಹ್ಮಣ್ಯ ಗೌಡರು ಇಲ್ಲಿ ಶಾಸಕರಾಗಿ ಹೋಗಿದ್ದಾರೆ. ಕುರುಂಜಿ ವೆಂಕಟ್ರಮಣ ಗೌಡರು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದಾರೆ. ಅವರು ಕೇವಲ ಶಾಸಕರಾಗಿದ್ದಾಗಲೂ ಇಡಿ ಸಮಾಜಜಕ್ಕೆ ದುಡಿದಿದ್ದಾರೆ. ಅವರ ಕೆಲಸ ಕಾರ್ಯ ಇವತ್ತೂ ಕೂಡಾ ಸ್ಮರಣೆ ಮಾಡಬೇಕೆಂದ ಅವರು ಅವರ ಮಾರ್ಗದರ್ಶದಲ್ಲೇ ನಾನೂ ಕೂಡಾ ನಡೆಯಬೇಕೆಂಬ ತೀರ್ಮಾಣ ಮಾಡಿದ್ದೇನೆ ಎಂದರು. ಶಾಸಕ ಸ್ಥಾನಕ್ಕೆ ನಾನೆಂದು ಲೋಬಿ ಮಾಡಿಲ್ಲ. ಸಾತ್ವಿಕ ಸಮಾಜದ ನಾಯಕನಿಗೆ ಸ್ಥಾನಮಾನ ಕೊಡಬೇಕೆಂಬ ದಿಶೆಯಲ್ಲಿ ನನ್ನನ್ನು ಗುರುತಿಸಿದ್ದಾರೆ ಎಂದು ಹೇಳಿದರು. ತನ್ನ ಅವಧಿಯಲ್ಲಿ ಮಾಡಿದ ಕೆಲಸ ಸಮಾಜಮುಖಿಯಾಗಿರಲಿ:ನೈರುಋತ್ಯ ಶಿಕ್ಷಕರ ಕ್ಷೇತ್ರದಿಂದ ವಿಜೇತರದ ಬೋಜೆ ಗೌಡರು ಮಾತನಾಡಿ ಇವತ್ತು ಅಧಿಕಾರ ಶಾಶ್ವತ ಅಲ್ಲ. ಅಧಿಕಾರ ಅವಧಿಯಲ್ಲಿ ಮಾಡಿದ ಕೆಲಸ ಸಮಾಜದಲ್ಲಿ ಮುಖ್ಯ. ಈ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದ ಅವರು ಜನಾಂಗದ ಋಣ ತೀರಿಸಲು ಕೆಲಸ ಮಾಡಲೇ ಬೇಕು ಎಂದರು. ಇವತ್ತು ದೇವರ ಮತ್ತು ಗುರುಗಳ ಆಶೀರ್ವಾದದಿಂದ ನಮ್ಮ ಕುಮಾರ ಸ್ವಾಮೀಯವರು ಮುಖ್ಯಮಂತ್ರಿಗಳಾಗಿದ್ದಾರೆ. ಸಮಾಜದಲ್ಲಿ ನೊಂದವರ ಧ್ವನಿಯಾಗಲು ನೀವು ಸಹಕರಿಸಬೇಕು ಎಂದು ವಿನಂತಿಸಿದ್ದರು. ಪುತ್ತೂರಿನ ಶಿಕ್ಷಣದಿಂದಾಗಿ ಈ ಸ್ಥಾನಕ್ಕೇರಿದೆ:ನಾನು ಪಿಯುಸಿಯಲ್ಲಿ ಪೈಲ್ ಆಗಿ ಪುತ್ತೂರಿನ ವಿವೇಕಾನಂದ ಕಾಲೇಜಿಗೆ ಸೇರ್ಪಡೆಗೊಂಡಿದ್ದೆ. ಇಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದ ಪರಿಣಾಮ ನಾನು ಮುಂದೆ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಕಾನೂನು ಶಿಕ್ಷಣ ಕಲಿತೆ. ಈ ನಿಟ್ಟಿನಲ್ಲಿ ನನ್ನ ಜೀವನದಲ್ಲಿ ಪುತ್ತೂರು ಪುನರ್‌ಜನ್ಮ ನೀಡಿದ ಊರು ಎಂದು ತನ್ನ ಬಾಲ್ಯದ ಅನುಭವವನ್ನು ಬೋಜೇ ಗೌಡರು ಹಂಚಿಕೊಂಡರು. ಸಮಾಜದವರಿಗೆ ಸರಕಾರದ ಉನ್ನತ ಸ್ಥಾನದ ಅವಕಾಶ: ನೂತನ ಶಾಸಕರಾಗಿ ಆಯ್ಕೆಯಾದ ಶಾಸಕ ಸಂಜೀವ ಮಠಂದೂರು ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡ ಎಸ್.ಎಲ್.ಬೋಜೇ ಗೌಡ ಅವರಿಗೆ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಅವರಿಬ್ಬರು ಸಂಘಕ್ಕೆ ಪ್ರವೇಶ ಮಾಡುವ ವೇಳೆ ಅವರಿಗೆ ಪೇಟ ಇಟ್ಟು ಚೆಂಡೆ ಸದ್ದಿನೊಂದಿಗೆ ಸ್ವಾಗತಿಸಲಾಗಿತ್ತು. ಬಳಿಕ ಸನ್ಮಾನ ಕಾರ್ಯಕ್ರಮದಲ್ಲಿ ಮೈಸೂರು ಪೇಟ, ಫಲಪುಷ್ಪ, ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಒಕ್ಕಲಿಗ ಗೌಡ ಸಂಘದ ಪುತ್ತೂರು ವಲಯ ಉಸ್ತುವಾರಿ ಲಿಂಗಪ್ಪ ಗೌಡ ತೆಂಕಿಲ ದಂಪತಿ ಸ್ವಾಮೀಜಿಯವರಿಗೆ ತುಳಸಿ ಮಾಲೆ, ಫಲಪುಷ್ಪ ಅರ್ಪಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ರವಿಮುಂಗ್ಲಿಮನೆ, ಸಂಘದ ಖಜಾಂಚಿ ಶ್ರೀಧರ್ ಗೌಡ ಕಣಜಾಲು, ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಿನ್ನಪ್ಪ ಗೌಡ ಮಲವೇಲು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಯು.ಪಿ.ರಾಮಕೃಷ್ಣ ಗೌಡ, ಆಶಾ ತಿಮ್ಮಪ್ಪ ಗೌಡ, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಪ್ರವೀಣ್ ಕುಂಟ್ಯಾನ, ಡಾ. ಶ್ರೀಧರ್ ಗೌಡ ಪಾಣತ್ತಿಲ, ಸಮುದಾಯ ಭವನದ ಉಸ್ತುವಾರಿ ಅಧ್ಯಕ್ಷ ಜನಾರ್ದನ ಗೌಡ ಬನ್ನೂರು, ಉದಯ ಕರ್ಮಲ, ಆನಂದ ಗೌಡ ಮೂವಪ್ಪು ಅತಿಥಿಗಳನ್ನು ಗೌರವಿಸಿದರು, ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ, ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಸಂಘದ ಮಾಜಿ ಅಧ್ಯಕ್ಷರುಗಳಾದ ಗಂಗಾಧರ ಗೌಡ ಕೆಮ್ಮಾರ, ಕೆ.ಆರ್ ಲಕ್ಷ್ಮಣ ಗೌಡ ಕುಂಟಿಕಾನ, ನ್ಯಾಂiiವಾದಿ ಚಂದ್ರಶೇಖರ್ ಮುಂಗ್ಲಿಮನೆ , ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಗೌಡ ನಂದಿಲ, ಮಹಿಳಾ ಗೌಡ ಸಂಘದ ಅಧ್ಯಕ್ಷ ಯಶೋದಾ, ಪ್ರಧಾನ ಕಾರ್ಯದರ್ಶಿ ಜಯಂತಿ ಆರ್.ಗೌಡ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಅಧ್ಯಕ್ಷ ಎ.ವಿ.ನಾರಾಯಣ, ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್ ಎ.ಎಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾರ್ವಜನಿಕ ಅಭಿನಂದನೆ:ಯುವ ಒಕ್ಕಲಿಗ ಗೌಡ ಸೇವಾ ಸಂಘ, ಮಹಿಳಾ ಒಕ್ಕಲಿಗ ಗೌಡ ಸಂಘ, ಗ್ರಾಮೀಣ ಒಕ್ಕಲಿಗ ಗೌಡ ಸಂಘ, ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ, ವಿದ್ಯಾ ಆರ್ ಗೌರಿ, ಜೆಡಿಎಸ್ ಅಭ್ಯರ್ಥಿ ಐ.ಸಿ.ಕೈಲಾಸ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು, ವಕೀಲರ ಸಂಘದ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ, ನ್ಯಾಯವಾದಿ ತೀರ್ಥ ಮುಂಗ್ಲಿಮನೆ, ನಿವೃತ್ತ ಕಮಾಡೆಂಡ್ ರಾಮ್‌ದಾಸ್ ಗೌಡ, ಜೇನು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಜಾಕೆ ಮಾದವ ಗೌಡ, ಡಾ. ಕುಶಾಲಪ್ಪ ಗೌಡ ಅಭಿಕಾರ್, ಸೇರಿದಂತೆ ನೂರಾರು ಮಂದಿ ಶಾಸಕರಿಗೆ ಮತ್ತು ವಿಧಾನಪರಿಷತ್ ಸದಸ್ಯರಿಗೆ ಗೌರವ ಸಮರ್ಪಣೆ ಮಾಡಿದರು.

Related posts

Leave a Reply