Header Ads
Breaking News

ಪುತ್ತೂರಿನಲ್ಲಿ ಇಂದಿನಿಂದ ಹಿಂಬದಿ ಸವಾರನಿಗೂ ಹೆಲ್ಮೆಟ್ ಕಡ್ಡಾಯ : ಸವಾರರ ಆಕ್ರೋಶ

ಪುತ್ತೂರು ನಗರ ಸಂಚಾರಿ ಪೊಲೀಸ್  ಠಾಣೆ ವ್ಯಾಪ್ತಿಯಲ್ಲಿ ಹೆಲ್ಮೆಟ್ ಧರಿಸದ ಹಿಬಂದಿ ಸವಾರನಿಗೆ ದಂಧ ವಿಧಿಸುವ ಪ್ರಕ್ರಿಯೆ ಇಂದಿನಿಂದ ಮತ್ತೆ ಆರಂಭಗೊಂಡಿದೆ. ಹೆಲ್ಮೆಟ್ ಧರಿಸದೇ ದ್ವಿ ಚಕ್ರವಾಹನದಲ್ಲಿ ಸಂಚಾರಿಸುತ್ತಿರುವ ಸಹ ಸವಾರರಿಗೆ ಇಂದಿನಿಂದ ರೂ. 500 ರಂತೆ ದಂಡ ವಿಧಿಸುತ್ತಿರುವ ವಿದ್ಯಮಾನ ಪುತ್ತೂರಿನ ಮುಕ್ರಂಪಾಡಿ ಸೇರಿದಂತೆ ಹಲವು ಕಡೇ ಕಂಡು ಬಂದಿದೆ.
ನ್ಯಾಯಾಲಯದ ಆದೇಶ ಹಾಗೂ ಮೇಲಾಧಿಕಾರಿಗಳ ನಿರ್ದೇಶನದಂತೆ ಪುತ್ತೂರಿನಲ್ಲಿಯೂ ಹಿಂಬದಿ ಸವಾರರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು .ನಿಯಮಗಳನ್ನು ಉಲ್ಲಂಘಿಸಿದ್ದು ಕಂಡುಬಂದಲ್ಲಿ ದಂಡ ವಿಧಿಸಲಾಗುತ್ತಿದೆ ಎಂದು ಸಂಚಾರಿ ಠಾಣಾ ಎಸ್.ಐ ರಾಮ ನಾಯ್ಕ ತಿಳಿಸಿದ್ದಾರೆ. ಪುತ್ತೂರು ನಗರ ಸಂಚಾರಿ ಪೊಲೀಸ್  ಠಾಣೆ ವ್ಯಾಪ್ತಿಯಲ್ಲಿ ಸದ್ಯ ಈ ನಿಯಮ ಕಟ್ಟು ನಿಟ್ಟಾಗಿ ಪಾಲಿಸಲು ಪೊಲೀಸರು  ನಿರ್ಧರಿಸಿದ್ದಾರೆ. ಆದರೆ ಇಂದು ಏಕಾಏಕಿ ಯಾವುದೇ ಮುನ್ಸೂಚನೆ ನೀಡದೆ, ಸಂಚಾರಿ ಪೊಲೀಸರು ದಂಡ ವಸೂಲಿಗೆ ಇಳಿದಿದ್ದಾರೆ, ಕೊರೊನಾ ಕಾಲದಲ್ಲಿ ಈಗಾಗಲೇ ಜನರು ಅರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಇದರ ನಡುವೆ ಇದು ಹೆಚ್ಚಿನ ಹೊರೆಯಾಗುತ್ತಿದೆ. ದಂಡ ವಸೂಲಿಗೆ ಇಳಿಯುವ ಮೊದಲು ನಿಯಮಗಳನ್ನು ಕಡ್ಡಾಯಗೊಳಿಸುತ್ತಿರುವ ಬಗ್ಗೆ ಜನರಿಗೆ ಪ್ರಚಾರದ ಮೂಲಕ ಮಾಹಿತಿ ನೀಡಬೇಕಿತ್ತು.ಪೊಲೀಸರು ಕೈಗೊಂಡಿರುವ ಈ ಸಡನ್ ನಿರ್ಧಾರದ ಸವಾರನಿಗೆ ನಷ್ಟ ಉಂಟು ಮಾಡುತ್ತಿದೆ ಎಂದು ಹಲವು ದ್ವಿಚಕ್ರ ಸವಾರರೂ ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

Leave a Reply

Your email address will not be published. Required fields are marked *