Header Ads
Breaking News

ಪುತ್ತೂರಿನಲ್ಲಿ ಎಪಿಎಂಸಿ ಸಾಮಾನ್ಯ ಸಭೆ

ಪ್ರತೀ ಚುನಾವಣೆ ಸಂದರ್ಭ ರೈತರು ತಮ್ಮಲ್ಲಿರುವ ಕೋವಿಗಳನ್ನು ಠಾಣೆಗಳಿಗೆ ಒಪ್ಪಿಸುವ ಸಂದರ್ಭದಲ್ಲಿ ರೈತರು ತೊಂದರೆಗೊಳಗಾಗುತ್ತಿದ್ದು, ಈ ಕುರಿತು ಮುಂದಿನ ದಿನಗಳಲ್ಲಿ ರೈತರಿಗೆ ಅನ್ಯಾಯ ಆಗದ ನಿಟ್ಟಿನಲ್ಲಿ ರೈತರ ಪರವಾಗಿ ಎಪಿಎಂಸಿ ವತಿಯಿಂದ ಕಾನೂನಾತ್ಮಕವಾಗಿ ನ್ಯಾಯಾಲಯದ ಮೆಟ್ಟಿಲೇರಲಾಗುವುದು ಎಂದು ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರ ಅಧ್ಯಕ್ಷತೆಯಲ್ಲಿ ಎಪಿಎಂಸಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ರಿವಾಲ್ವರ್ ಇದ್ದವರು ತಮ್ಮ ಬಳಿಯೇ ಇಟ್ಟುಕೊಳ್ಳಲು ಅವಕಾಶವಿದ್ದು, ಕೋವಿ ಹೊಂದಿದ ರೈತರು ಒದ್ದಾಡುವ ಪರಿಸ್ಥಿತಿ ಉಂಟಾಗಿದೆ. ಈ ರೀತಿಯ ಬೇರೆ ಬೇರೆ ಕಾನೂನುಗಳಿಂದ ಬಡ ರೈತರು ತೊಂದರೆ ಪಡುವಂತಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.ಈಗಾಗಲೇ ಕೃಷಿಕರು ಕೊಳವೆ ಬಾವಿ ತೆರೆಯುವಲ್ಲಿ ತೊಂದರೆ ಪಡುತ್ತಿದ್ದು, ಪರವಾನಿಗೆ ಇಲ್ಲದೆ ಕೊಳವೆ ಬಾವಿ ತೆರೆಯದ ಪರಿಸ್ಥಿತಿ ಉಂಟಾಗಿದೆ. ಈ ಕುರಿತು ಶಾಸಕರು ಈಗಾಗಲೇ ನಗರಸಭೆ ಜತೆ ಚರ್ಚಿಸಿದ್ದಾರೆ. ಈ ನಿಟ್ಟಿನಲ್ಲಿ 2-3 ಎಕ್ರೆ ತೋಟ ಇದ್ದವರಿಗೆ ಕೊಳವೆ ಬಾವಿ ತೆರೆಯಲು ಅವಕಾಶ ನೀಡುವ ನಿಟ್ಟಿನಲ್ಲಿ ಎಪಿಎಂಸಿ ವತಿಯಿಂದ ನೂತನ ಸಚಿವ ಅಂಗಾರ ಹಾಗೂ ಶಾಸಕರಿಗೆ ಮನವಿ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.ಎಪಿಎಂಸಿ ರಸ್ತೆಯನ್ನು ನಗರಸಭೆಗೆ ಹಸ್ತಾಂತರಿಸುವ ಕುರಿತು ನಗರಸಭೆ ಅಧ್ಯಕ್ಷರು ರಸ್ತೆ ಹಸ್ತಾಂತರ ಮಾಡಿದರೆ ನಾವು ತೆಗೆದುಕೊಳ್ಳಲು ಬದ್ಧ ಎಂದು ತಿಳಿಸಿದ್ದಾರೆ. ಇದರ ಸಾಧಕ-ಬಾಧಕಗಳ ಕುರಿತು ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಸಭೆಯಲ್ಲಿ ನವೆಂಬರ್ ತಿಂಗಳಲ್ಲಿ ನಡೆದ ಸಾಮಾನ್ಯ ಸಭೆಯ ನಡಾವಳಿಗಳನ್ನು ಓದಲಾಯಿತು. ಅಲ್ಲದೆ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಖರ್ಚು, ವೆಚ್ಚ ಹಾಗೂ ಉಳಿತಾಯಗಳ ಪಟ್ಟಿಯನ್ನು ಸಭೆಯ ಮುಂದಿಡಲಾಯಿತು. ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ಹಿಂದಿನ ಸಭೆಯ ನಡಾವಳಿಗಳನ್ನು ಓದಿದರು. ಉಪಾಧ್ಯಕ್ಷ ಮಂಜುನಾಥ ಎನ್.ಎಸ್., ಸದಸ್ಯರಾದ ಶುಕೂರ್ ಹಾಜಿ, ಬಾಲಕೃಷ್ಣ ಬಾಣಜಾಲು , ಪುಲಸ್ತ?ಯ ರೈ, ತ್ರಿವೇಣಿ ಪರ?ವೋಡಿ, ಬಾಬು, ಮೋಹನಾಂಗಿ, ಗುರುವ, ಮೇದಪ್ಪ, ಕೃಷ್ಣ ಕುಮಾರ್ ರೈ, ಕುಶಾಲಪ್ಪ ಗೌಡ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *