Header Ads
Breaking News

ಪುತ್ತೂರಿನಲ್ಲಿ ಕಳ್ಳರ ಹಾವಳಿ : 2 ಲಕ್ಷಕ್ಕೂ ಅಧಿಕ ಮೌಲ್ಯದ ನಗದು ಕಳವು

ಪುತ್ತೂರು ಉಪ್ಪಿನಂಗಡಿ ಹೆದ್ದಾರಿಯ ದಾರಂದಕುಕ್ಕು ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕಳ್ಳತನ ನಡೆಸಿ 2 ಲಕ್ಷದ 20 ಸಾವಿರ ರೂಪಾಯಿಯನ್ನು ದೋಚಲಾಗಿದ್ದು ಪ್ರಕರಣವೂ ತಡವಾಗಿ ಬೆಳಕಿಗೆ ಬಂದಿದೆ.

ಪುತ್ತೂರು ತಾಲೂಕಿನ ಚಿಕ್ಕ ಮುಡ್ನೂರು ಗ್ರಾಮದ ದಾರಂದಕುಕ್ಕು ಬಳಿ ಹೆದ್ದಾರಿ ಸಮೀಪದ ಮನೆಯಲ್ಲಿ ಈ ಕೃತ್ಯ ನಡೆದಿದೆ. ಇಲ್ಲಿನ ಗುತ್ತಿಗೆದಾರ ಅಶ್ರಫ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಈ ಕೃತ್ಯ ನಡೆದಿದೆ. ಮಕ್ಕಳಿಗೆ ದಸರಾ ರಜೆಯ ಕಾರಣ ಮನೆಯವರು ಅಶ್ರಫ್ ರವರ ಮನೆಗೆ ಹೋಗಿದ್ದ ಸಂದರ್ಭ ಈ ಕಳ್ಳತನ ನಡೆದಿದೆ.

ಅಕ್ಟೋಬರ್ 2 ರಂದು ಬೆಳಿಗ್ಗೆ ಸಾಲೆತ್ತೂರು ಸಮೀಪದ ಮಾವನ ಮನೆಗೆ ಹೋಗಿದ್ದ ಕುಟುಂಬ ಅಕ್ಟೋಬರ್ 5 ರಂದು ಮನೆಗೆ ವಾಪಸಾಗಿದ್ದು ಆ ಕೃತ್ಯ ಬೆಳಕಿಗೆ ಬಂದಿದೆ. ಅಂದು ಮನೆಗೆ ಬಂದು ನೋಡಿದಾಗ ಮನೆಯಲ್ಲಿದ್ದ ಬಟ್ಟೆ ಬರೆ ಇತ್ಯಾದಿಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು, ಮನೆಯ ಕಪಾಟುಗಳನ್ನೂ ಜಾಲಾಡಿದ ಕುರುಹುಗಳು ಕಂಡು ಬಂದಿದ್ದವು. ಗುತ್ತಿಗೆ ಕೆಲಸದವರಿಗೆ ಸಂಬಳ ಬಟಾವಡೆ ಮಾಡಲು ಮನೆಯ ಕಪಾಟಿನಲ್ಲಿ ಇಟ್ಟಿದ್ದ ಹಣ ಕಳ್ಳತನವಾಗಿದೆ ಎಂದು ಅಶ್ರಫ್ ರವರು ಪುತ್ತೂರು ನಗರ ಠಾಣೆಗೆ ನೀಡಿದ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಿವೈಎಸ್‍ಪಿ ದಿನಕರ ಶೆಟ್ಟಿ, ಪುತ್ತೂರು ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಠಾಣೆಯ ಅಪರಾಧ ಪತ್ತೆ ದಳ ವಿಭಾಗದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

Leave a Reply

Your email address will not be published. Required fields are marked *