Header Ads
Breaking News

ಪುತ್ತೂರಿನಲ್ಲಿ ಭಜನಾ ಸತ್ಸಂಗ 2ಸಾವಿರ ಭಜನಾ ತಂಡಗಳು ಭಾಗಿ : ಡಾ. ಎಲ್.ಎಚ್. ಮಂಜುನಾಥ್ ಹೇಳಿಕೆ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಭಜನಾ ಪರಿಷತ್‍ನ ಪ್ರಥಮ ಕಾರ್ಯಕ್ರಮವಾಗಿ ಫೆ.8ರಂದು ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಗದ್ದೆಯಲ್ಲಿ ಭಜನಾ ಸತ್ಸಂಗ ಸಮಾವೇಶ ನಡೆಯುತ್ತಿದೆ. 20ನೇ ವರ್ಷದ ಶುಭಾವಸರದಲ್ಲಿ ಭಜನಾ ಪರಿಷತ್ ಸಂಸ್ಥೆಯು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆರಂಭಗೊಂಡಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಪಾಲಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಹೇಳಿದರು.

ಅವರು ಪುತ್ತೂರಿನಲ್ಲಿ ಭಜನಾ ಸತ್ಸಂಗ ಸಮಾವೇಶದ ಸಿದ್ದತೆಗಳ ಪರಿಶೀಲನೆ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿದರು. ಶ್ರೀ ಕ್ಷೇತ್ರದ ವತಿಯಿಂದ ಭಜನಾ ಕೂಟಗಳನ್ನು ಕಳೆದ 25 ವರ್ಷಗಳಿಂದ ನಡೆಸಲಾಗುತ್ತದೆ. ಪುತ್ತೂರಿನ ಕಾರ್ಯಕ್ರಮದಲ್ಲಿ 2 ಸಾವಿರ ಭಜನಾ ತಂಡಗಳು ಪಾಲ್ಗೊಳ್ಳಲಿವೆ ಎಂದರು.

ಈ ಸಂದರ್ಭ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಧನ್ಯಕುಮಾರ್ ರೈ ಬೆಳಿಯೂರು ಗುತ್ತು, ಪ್ರಧಾನ ಕಾರ್ಯದರ್ಶಿ ಲೋಕೇಶ್ ಬೆತ್ತೋಡಿ, ಸಂಚಾಲಕರಾದ ಶಶಿಕುಮಾರ್ ಬಾಲ್ಯೊಟ್ಟು, ಪದ್ಮನಾಭ ಶೆಟ್ಟಿ, ಮಹಾಬಲ ರೈ ಒಳತ್ತಡ್ಕ, ಯು. ಲೋಕೇಶ ಹೆಗ್ಡೆ, ರಾಜೇಶ್ ಬನ್ನೂರು, ರಾಜಾರಾಂ ಶೆಟ್ಟಿ ಕೋಳ್ಪೆಗುತ್ತು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *