Header Ads
Breaking News

ಪುತ್ತೂರಿನ ಕೊಡಿನೀರುನಲ್ಲಿ ಪ್ರಸಾದಿತ ದಶಾವತಾರ ಯಕ್ಷಗಾನ

ಜೀವನ ಮೌಲ್ಯಗಳನ್ನು ಎತ್ತಿಹಿಡಿದು ಗಟ್ಟಿಗೊಳಿಸುವಲ್ಲಿ ಯಕ್ಷಗಾನದ ಕೊಡುಗೆ ಮಹತ್ತರವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯವಾಹ ನಾ.ಸೀತಾರಾಮ ಅಭಿಪ್ರಾಯಪಟ್ಟರು.

ಅವರು ಬುಧವಾರ ರಾತ್ರಿ ನರಿಮೊಗರು ಗ್ರಾಮದ ಕೊಡಿನೀರುನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ “ಸಂಪೂರ್ಣ ಶ್ರೀ ದೇವಿ ಮಹಾತ್ಮೆ” ಸೇವಾ ಬಯಲಾಟದ ಅಂಗವಾಗಿ ನಡೆದ ಧಾರ್ಮಿಕ ಸಭೆ, ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಹಿಂದೂ ಧರ್ಮದ ಮೌಲ್ಯಗಳನ್ನು, ಬದುಕಿನ ಉತ್ಥಾನ, ವಿಕಾಸವನ್ನು ಸಮರ್ಥವಾಗಿ ಸಮಾಜದಲ್ಲಿ ಗಟ್ಟಿಗೊಳಿಸುವಲ್ಲಿ ಯಕ್ಷಗಾನ ಕಲೆ ಪ್ರಭಾವ ಬೀರಿದೆ. ಇದಕ್ಕೆ ಇನ್ನಷ್ಟು ಬುನಾದಿ ಹಾಕುವ ನಿಟ್ಟಿನಲ್ಲಿ ವೆಂಕಟರಮಣ ಕಳುವಾಜೆ ಹಾಗೂ ಎ.ವಿ.ನಾರಾಯಣ ಕುಟುಂಬಸ್ಥರು ಏರ್ಪಡಿಸಿದ ಈ ಕಾರ್ಯ ಶ್ಲಾಘನೀಯ ಎಂದರು.

ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲಚಕ್ರದಲ್ಲಿ ನಮಗೆ ಒದಗಿ ಬರುವ ಅವಕಾಶಗಳನ್ನು ಒಳ್ಳೆಯ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ಬರಬೇಕು. ಈ ನಿಟ್ಟಿನಲ್ಲಿ ಎ.ವಿ.ನಾರಾಯಣ ಅವರ ಕುಟುಂಬಕ್ಕೆ ಒದಗಿ ಈ ಸೇವೆಯಿಂದ ಊರು ಸಮೃದ್ಧಿಗೊಳ್ಳಲಿ ಎಂದರು.

ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಯಕ್ಷಗಾನ ಕಲಾವಿದ ಶ್ರೀಧರ ಭಂಡಾರಿ, ಪ್ರಸಿದ್ಧ ಯಕ್ಷಗಾನ ಭಾಗವತೆ ಭವ್ಯಶ್ರೀ ಹರೀಶ್ ಕುಲ್ಕುಂದ, ಹಾಗೂ ವೀರಮಂಗಲ ಶ್ರೀಕೃಷ್ಣ ಕಲಾಕೇಂದ್ರದ ವಿದ್ವಾನ್ ಗೋಪಾಲಕೃಷ್ಣ ಅವರನ್ನು ಎ.ವಿ.ನಾರಾಯಣ ಕುಟುಂಬಸ್ಥರು ಸನ್ಮಾನಿಸಿದರು.

ಕಾರ್ಯಕ್ರಮ ಆಯೋಜಕರಾದ ವೆಂಕಟರಮಣ ಗೌಡ ಕಳುವಾಜೆ ಸ್ವಾಗತಿಸಿದರು. ವೇದಿಕೆಯಲ್ಲಿ ಎ.ವಿ.ನಾರಾಯಣ, ಮುಖ್ಯ ಅತಿಥಿಗಳಾಗಿ ಹಿರಿಯ ಸಮಾಜ ಸೇವಕಿ ನಳಿನಿ ಲೋಕಪ್ಪ ಗೌಡ ಕೆರೆಮನೆ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪ್ರಗತಿಪರ ಕೃಷಿಕ ಸುಕುಮಾರ್ ಜೈನ್ ಕೈಪಂಗಳಗುತ್ತು, ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಟಿ.ಮಹೇಶ್ಚಂದ್ರ ಸಾಲಿಯಾನ್, ನರಿಮೊಗರು ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಮುಕ್ವೆ, ಅಲುಂಬುಡ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಗುಡ್ಡಪ್ಪ ಗೌಡ, ನಾಗೇಶ್ ಕೆಡೆಂಜಿ ಪಾಲ್ಗೊಂಡಿದ್ದರು.
ಸಭಾ ಕಾರ್ಯಕ್ರಮದ ನಂತರ ಶ್ರೀ ದೇವಿಯ ಪೂಜೆ ನಡೆದು ಅನ್ನಸಂತರ್ಪಣೆ ಜರಗಿತು. ಬಳಿಕ “ಸಂಪೂರ್ಣ ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ ನಡೆಯಿತು.

Related posts

Leave a Reply

Your email address will not be published. Required fields are marked *