Header Ads
Breaking News

ಪುತ್ತೂರಿನ ಗಾಂಧಿ ಕಟ್ಟೆ ಗಾಂಧಿ ಬಂಧನಮುಕ್ತ!ತಿಂಗಳೊಳಗೆ ನವೀಕರಣಗೊಂಡು ಐತಿಹಾಸಿಕ ಗಾಂಧಿ ಕಟ್ಟೆ ಲೋಕಾರ್ಪಣೆ

ಪುತ್ತೂರು ಗಾಂಧಿಕಟ್ಟೆ ಅಭಿವೃದ್ಧಿಯ ದೃಷ್ಟಿಯಿಂದ ನಗರಸಭೆಯಿಂದ 8 ಲಕ್ಷ ರೂ. ವೆಚ್ಚದದಲ್ಲಿ ನವೀಕರಣ ಕಾಮಗಾರಿ ವೇಳೆ ಕಾಮಗಾರಿಗೆ ರಾಜ್ಯ ಉಚ್ಛನ್ಯಾಯಾಲಯದಿಂದ ತಡೆಯಾಜ್ಞೆ ನೀಡಿದ್ದರಿಂದ ಪುತ್ತೂರು ಗಾಂಧಿಕಟ್ಟೆಯ ಗಾಂಧಿ ಪ್ರತಿಮೆ ಸಮೀಪದ ಕೋಣೆಯೊಳಗೆ ಇರಿಸಲಾಗಿದ್ದು, ಕೋರ್ಟ್ ತೀರ್ಪಿನ ಬಳಿಕ ಪುತ್ತೂರು ಗಾಂಧಿ ಕಟ್ಟೆಯ ಗಾಂಧಿ ಪ್ರತಿಮೆ ಪುನರ್‍ಪ್ರತಿಷ್ಟೆ ನಡೆಸಲಾಗಿದೆ.

ನಗರದ ಹೃದಯಭಾಗದ ಬಸ್ ನಿಲ್ದಾಣದ ಬಳಿ ಇರುವ ಗಾಂಧಿ ಕಟ್ಟೆ ಹಾಗೂ ಗಾಂಧಿ ಯವರ ಪ್ರತಿಮೆಯನ್ನು 2019ರ ಮಾ.17 ರಂದು ತಾತ್ಕಾಲಿಕವಾಗಿ ತೆರವುಗೊಳಿಸಿ ಕೆಎಸ್‍ಆರ್‍ಟಿಸಿ ವಾಣಿಜ್ಯ ಸಕೀರ್ಣದ ಕೋಣೆಯೊಳಗೆ ಗಾಂಧಿ ಪ್ರತಿಮೆ ಇರಿಸಲಾಗಿತ್ತು. ಗಾಂಧಿ ಕಟ್ಟೆ ಮರು ನಿರ್ಮಿಸುವ ಉದ್ದೇಶದಿಂದ ಸ್ಥಳೀಯಾಡಳಿತ ನಗರಸಭೆ ಈ ಕ್ರಮ ಕೈಗೊಂಡಿತ್ತು. ಈವೇಳೆ ಸ್ಥಳೀಯನೋರ್ವ ರಾಜ್ಯ ಉಚ್ಛ ನ್ಯಾಯಾಲಯದಿಂದ ಕಾಮಗಾರಿಗೆ ತಡೆಯಾಜ್ಞೆ ತಂದಿರುವುದರಿಂದ ಗಾಂಧಿ ಕಟ್ಟೆ- ಅಶ್ವಥ ಕಟ್ಟೆ ನಿರ್ಮಾಣ ಯೋಜನೆ ನೆನೆಗುದಿಗೆ ಬಿದ್ದಿದೆ.

ಪುತ್ತೂರು ನಗರಸಭೆಯ ಪರವಾಗಿ ಹೈಕೋರ್ಟ್ ಆದೇಶ ನೀಡಿದ್ದರಿಂದ ಕಳೆದ ತಿಂಗಳು ಗಾಂಧಿಕಟ್ಟೆ ಕಾಮಗಾರಿ ಮತ್ತೆ ಆರಮಭಗೊಮಡಿತ್ತು. ಪ್ರಸ್ಥುತ ಗಾಂಧಿ ಪ್ರತಿಮೆಯನ್ನು ಪುನರ್‍ಸ್ಥಾಪಿಸಿ ಳಿದ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಕೋನೆಯ ವಾರ ಜಿಲಾಧಿಕಾರಿಗಳು ಪುತ್ತೂರಿಗೆ ಆಗಮಿಸಲಿದ್ದು, ಈವೇಳೆ ಕಾಮಗಾರಿ ಗುಣಮಟ್ಟದದ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಕೋನೆಯವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಬಳಿಕ ರಾಜ್ಯ ನಾಯಕರನ್ನು ಅಥವಾ ಹಿರಿಯ ಗಾಂಧಿ ಚಿಂತಕರ ಮೂಲಕ ಗಾಂಧಿಕಟ್ಟೆ ಲೋಕಾರ್ಪಣೆಗೊಳಿಸಲು ನಗರಸಭೆ ತೀರ್ಮಾನಿಸಿದೆ.

8 ಲಕ್ಷ ರೂ. ವೆಚ್ಚದಲ್ಲಿ ಗಾಂಧಿಕಟ್ಟೆ ಅಭಿವೃದ್ಧಿ ನಡೆಯಲಿದ್ದು, ಗಾಂಧಿ ಕಟ್ಟೆಯನ್ನು ರಸ್ತೆಗೆ ಸಮಾನಾಂತರವಾಗಿ ಕೆಳಭಾಗಕ್ಕೆ ಮರು ನಿರ್ಮಿಸುವುದು ಮತ್ತು ಅಶ್ವತ್ಥ ಮರಕ್ಕೆ ಸುತ್ತಲೂ ಭದ್ರವಾದ ಕಟ್ಟೆ ಕಟ್ಟುವ ಯೋಜನೆ ನಗರಸಭೆ ಹಾಕಿಕೊಂಡಿದೆ. ಅಶ್ವತ್ಥ ಮರಕ್ಕೆ ಹಾನಿಯಾಗದಂತೆ ಪೂರಕ ವ್ಯವಸ್ಥೆಗಳನ್ನು ಕೈಗೊಳ್ಳುವ ಯೋಜನೆ ನಗರಸಭೆ ರೂಪಿಸಿದೆ.

ಪುತ್ತೂರು ನಗರಸಭೆಯ ಪರವಾಗಿ ಹೈಕೋರ್ಟ್ ಆದೇಶ ಬಂದಿರುವುದರಿಂದ ಗಾಂಧಿಕಟ್ಟೆ ಅಭಿವೃದ್ದಿಗೆ ಹೆಚ್ಚಿನ ಬಲ ಬಂದಂತಾಗಿದೆ. ಈಗಾಗಲೇ ಗಾಂ„ ಪ್ರತಿಮೆ ಪುನರ್‍ಪ್ರತಿಷ್ಟಾಪಿಸುವ ಕಾರ್ಯ ನಡೆದಿದೆ. ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲೇ ಐತಿಹಾಸಿಕ ಪುತ್ತೂರಿನ ಗಾಂಧಿಕಟ್ಟೆ ಲೋಕಾರ್ಪಣೆಗೊಳ್ಳಲಿದೆ.

Related posts

Leave a Reply

Your email address will not be published. Required fields are marked *