

ಪುತ್ತೂರು: ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಧರ್ಮದರ್ಶಿ ಬೊಳುವಾರು ನಿವಾಸಿ ಪಿ ನಾರಾಯಣ ಮಣಿಯಾಣಿ(84) ಫೆ. 12ರ ನಸುಕಿನ ಜಾವ ನಿಧನರಾಗಿದ್ದಾರೆ.ಸಂಘ ಪರಿವಾರದಲ್ಲಿ ಸಕ್ರಿಯರಾಗಿದ್ದ ನಾರಾಯಣ ಮಣಿಯಾಣಿ ಅವರು ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿದ್ದರು. ಪುತ್ತೂರು ಮುಖ್ಯರಸ್ತೆಯಲ್ಲಿ ವಾಣಿ ಪ್ರಿಂಟರಿ ಸಂಸ್ಥೆಯನ್ನು ಹೊಂದಿದ್ದ ಅವರು ತನ್ನ ನಿವೃತ್ತಿಯಲ್ಲಿ ಅವರ ಪುತ್ರ ನೀಲಂತ್ ಅವರು ಸಂಸ್ಥೆಯನ್ನು ಮಂದುವರಿಸಿದರು. ಮೃತರು ಪತ್ನಿ ಭಾಗೀರಥಿ, ಪುತ್ರರಾದ ಪುತ್ತೂರು ಪತ್ರಕರ್ತರ ಸಂಘದ ಸದಸ್ಯ ಹಾಗು ಮೆನೇಜರ್, ವಿ4ನ್ಯೂಸ್ ವರದಿಗಾರ ಪ್ರವೀಣ್ ಕುಮಾರ್ಬೊಳುವಾರು, ನೀಲಂತ್ ಬೊಳುವಾರು, ಪುತ್ರಿ ಬೆಂಗಳೂರಿನಲ್ಲಿರುವ ಡಾ. ವಾಣಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.