Header Ads
Header Ads
Breaking News

ಪುತ್ತೂರು: ಆಟೋ ರಿಕ್ಷಾ ಮಾಲಕರ ಸಂಘದಿಂದ ಪುತ್ತೂರು ಸಹಾಯಕ ಕಮಿಷನರ್‌ಗೆ ಮನವಿ

ಪುತ್ತೂರು ಬಿ.ಎಂ.ಎಸ್. ಆಟೋ ರಿಕ್ಷಾ ಚಾಲಕ ಮಾಲಕರ ಸಂಘವು ರಿಕ್ಷಾ ಚಾಲಕರ ಮೇಲೆ ಬಾಡಿಗೆ ಮಾಡುವಾಗ ಹೊಸ ನಿಯಮಗಳನ್ನು ಜಾರಿ ಮಾಡಿರುವುದನ್ನು ಖಂಡಿಸಿ ಪುತ್ತೂರು ಸಹಾಯಕ ಕಮೀಶನರ್‌ಗೆ ಮನವಿಯನ್ನು ನೀಡಿದರು.
ಈ ಸಂದರ್ಭ ಬಿ.ಎಂ.ಎಸ್. ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಭಾಸ್ಕರ್ ನಾಯ್ಕ್ ಮಾತನಾಡಿ, ಕಳೆದ ಕೆಲದಿನಗಳಿಂದ ಆಟೋ ರಿಕ್ಷಾದ ಚಾಲಕರ ಮೇಲೆ ವಿವಿಧ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಇದರಿಂದಾಗಿ ನಮಗೂ ಬಡಜನರಿಗೂ ಹೆಚ್ಚಿನ ತೊಂದರೆಗಳಾಗುತ್ತಿದೆ ಎಂದರು. ಪುತ್ತೂರು ಬಿ.ಎಂ.ಎಸ್. ಆಟೋ ರಿಕ್ಷಾ ಚಾಲಕ ಮಾಲಕರ ಸಂಘವು ಸಹಾಯಕ ಕಮೀಶನರ್ ಎಚ್.ಕೆ. ಕೃಷ್ಣಮೂರ್ತಿಗೆ, ಪುತ್ತೂರು ಶಾಸಕರಿಗೆ, ಪುತ್ತೂರು ಡಿವೈಎಸ್‌ಪಿ, ಪುತ್ತೂರು ಆರ್‌ಟಿಓಗೆ, ಪುತ್ತೂರು ಎಸ್‌ಐಗೆ ಹಾಗೂ ಪುತ್ತೂರು ಸಂಚಾರ ಎಸ್‌ಐಗೆ ಮನವಿಯನ್ನು ನೀಡಿದರು. ಈ ಸಂದರ್ಭ ಪುತ್ತೂರು ಸಹಾಯಕ ಕಮೀಶನರ್ ಎಚ್.ಕೆ. ಕೃಷ್ಣಮೂರ್ತಿ ಮಾತನಾಡಿ, ಈ ವಿಷಯವನ್ನು ಮುಂದಿನ ಸಭೆಯಲ್ಲಿ ವಿಚಾರಣೆ ಮಾಡುತ್ತೇನೆ ಎಂದರು. ಈ ಸಂದರ್ಭ ಸಂಘದ ಕಾರ್ಯದರ್ಶಿ ಮಹೇಶ್ ಪ್ರಭು, ಕೋಶಾಧಿಕಾರಿ ವಿಕ್ರಮ್ ಪರ್ಲಡ್ಕ, ಮಾಜಿ ಅಧ್ಯಕ್ಷ ರಂಜನ್, ಗೌರವಾಧ್ಯಕ್ಷ ಬಿ.ಕೆ ದೇವಪ್ಪ ಗೌಡ ಹಾಗೂ ಮತ್ತಿತರ ಸದಸ್ಯರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *