Header Ads
Header Ads
Breaking News

ಪುತ್ತೂರು : ಉಲಾಯಿ – ಪಿದಾಯಿ ಇಸ್ಪೀಟ್ ಆಡುತ್ತಿದ್ದ ಆರೋಪಿಗಳು ಬಂಧನ

 ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ‘ಉಲಾಯಿ-ಪಿದಾಯಿ’ ಇಸ್ಪೀಟ್ ಆಡುತ್ತಿದ್ದ 7 ಮಂದಿಯನ್ನು ಪುತ್ತೂರು ನಗರಠಾಣಾ ಪೊಲೀಸರು ಬಂಧಿಸಿದ್ದಾರೆ.ಪುತ್ತೂರು ನಗರಠಾಣಾ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಸಿದ್ಯಾಳ ಎಂಬಲ್ಲಿ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ಊರಮಾಲ್ ನಿವಾಸಿ ಶಿವರಾಮ ಶೆಟ್ಟಿ(46), ತಾರಿಗುಡ್ಡೆ ನಿವಾಸಿ ಬಿ.ವಿ.ಪ್ರಭಾಕರ ರೈ( 45), ಬೊಳುವಾರು ನಿವಾಸಿ ಸೂರಜ್ ರೈ(24), ಬನ್ನೂರು ನಿವಾಸಿ ಸೇಸಪ್ಪ ಪೂಜಾರಿ (58), ರೋಟರೀಪುರ ನಿವಾಸಿ ರಾಮಚಂದ್ರ ಶೆಟ್ಟಿ(38), ಜಿಡೆಕಲ್ಲು ನಿವಾಸಿ ಸುರೇಶ್ (32) ಮತ್ತು ಕೆಮ್ಮಾಯಿ ಭರತ್‍ಪುರ ನಿವಾಸಿ ದಿಲೀಪ್ (31) ಬಂಧಿತ ಆರೋಪಿಗಳು.

ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಮಾರ್ಗದರ್ಶನದಲ್ಲಿ ಎಸೈ ಒಮನಾ ಮತ್ತು ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಆಟಕ್ಕೆ ಬಳಸಲಾದ ಇಸ್ಪೀಟ್ ಎಲೆ, ನಗದು ರೂ. 3700 ಮತ್ತು 3 ಮೋಟಾರ್ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಎಎಸೈ ಚಿದಾನಂದ, ಸಿಬ್ಬಂದಿಗಳಾದ ಜಗದೀಶ್, ಸ್ಕರಿಯ, ಮಂಜು, ನಾಗೇಶ್ ಮತ್ತು ಕಿರಣ್ ಪಾಲ್ಗೊಂಡಿದ್ದರು. ನಗರಠಾಣೆಯಲ್ಲಿ ಕೇಸು ದಾಖಲಾಗಿದೆ.

Related posts

Leave a Reply

Your email address will not be published. Required fields are marked *