Header Ads
Header Ads
Breaking News

ಮಿತ್ತೂರು : ಒಂದೇ ಸ್ಥಳದಲ್ಲಿ ಚರಂಡಿಗೆ ಉರುಳಿದ ಎರಡು ಬಸ್‌ಗಳು

ಒಂದೇ ಸ್ಥಳದಲ್ಲಿ ಎರಡು ಬಸ್‌ಗಳು ಚರಂಡಿಗೆ ಉರುಳಿದ ಘಟನೆ ಮಿತ್ತೂರು ಎಂಬಲ್ಲಿ ನಡೆದಿದೆ. ಮಂಗಳೂರಿನಿಂದ ನಿನ್ನೆ ರಾತ್ರಿ ಮಂಗಳೂರಿಗೆ ಹೊರಟ ಖಾಸಗಿ ಬಸ್ ಮಿತ್ತೂರು ತಿರುವಿನಲ್ಲಿ ಹಾಲಿನ ವಾಹನವನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ಕಳೆದು ರಸ್ತೆ ಬದಿಗೆ ಉರುಳಿದೆ. ಈ ಘಟನೆ ನಡೆದು ಸ್ಪಲ್ಪ ಹೊತ್ತಿನಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಇನ್ನೊಂದು ಕೆಎಸ್‌ಆರ್‌ಟಿಸಿ ಐರಾವತ ಬಸ್ ಅದೇ ಸ್ಥಳದಲ್ಲಿ ಇನ್ನೊಂದು ಬಸ್ ಬಿದ್ದಿರೋದನ್ನು ಕಂಡು ಹಠತ್ತನೆ ಬ್ರೇಕ್ ಹಾಕಿದ್ದಾರೆ. ಇದರಿಂದ ಬಸ್ ಚರಂಡಿಗೆ ಉರುಳಿದೆ. ಘಟನೆಯಲ್ಲಿ ಎರಡೂ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಎರಡು ಬಸ್‌ಗಳು ಅಕ್ಕಪಕ್ಕದಲ್ಲಿ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಎರಡು ಬಸ್ಸಿನ ಮುಂಭಾಗ ಜಖಂಗೊಂಡಿದೆ. ಟೆಲಿಫೋನ್ ಕ್ಯಾಬಲ್‌ಗೆ ಹಾನಿಯಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ಪರಿಶೀಲನೆ ನಡೆಸಿದ್ದಾರೆ.

Related posts

Leave a Reply

Your email address will not be published. Required fields are marked *