Header Ads
Header Ads
Header Ads
Breaking News

ಪುತ್ತೂರು ತಾಲೂಕಿನ ಉದನೆ – ಶಿಬಾಜೆ ರಸ್ತೆಗೆ ಚಾಲನೆ ಉದನೆಯಲ್ಲಿ ಸೇತುವೆ ನಿರ್ಮಾಣಕ್ಕೆ ಸಚಿವ ರೈ ಶಂಕುಸ್ಥಾಪನೆ

 

ಪುತ್ತೂರು ತಾಲೂಕಿನ ಶಿರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉದನೆ – ಶಿಬಾಜೆ ರಸ್ತೆಗೆ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಡಾಮರು ಕಾಮಗಾರಿ ಹಾಗೂ ಉದನೆಯಲ್ಲಿ 9 ಕೋಟಿ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಶಂಕು ಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕರಾಗಿಲ್ಲದಿದ್ದರೂ ಅಭಿವೃದ್ಧಿಯ ದೃಷ್ಟಿಯಿಂದ ಸುಳ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ ಎಂದರು.

ಇನ್ನೂ ಜಿಲ್ಲೆಗೆ ನಾಲ್ಕು ಸೇತುವೆಗಳನ್ನು ಮಂಜೂರು ಮಾಡಿಸಿದ್ದೇನೆ. ಶಾಸಕನಾಗಿ ಮೊದಲ ಆದ್ಯತೆ ಸ್ವಕ್ಷೇತ್ರವಾದ ಬಂಟ್ವಾಳಕ್ಕೆ ನೀಡಿದರೆ, ಬಳಿಕದ ಆದ್ಯತೆಯನ್ನು ಮೀಸಲು ಕ್ಷೇತ್ರವಾದ ಸುಳ್ಯಕ್ಕೆ ನೀಡಿದ್ದೇನೆ. ನಾಲ್ಕು ಸೇತುವೆಗಳಲ್ಲಿ ಎರಡು ದೊಡ್ಡ ಸೇತುವೆಗಳು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲೇ ಬರುತ್ತವೆ. ಅವುಗಳಲ್ಲಿ ಒಂದು ಉದನೆಯಲ್ಲಿ ಗುಂಡ್ಯ ಹೊಳೆಗೆ ನಿರ್ಮಾಣವಾದರೆ, ಇನ್ನೊಂದು ಅರಂತೋಡಿನಲ್ಲಿ ನಿರ್ಮಾಣವಾಗಲಿದೆ ಅಂತಾ ತಿಳಿಸಿದರು.

Related posts

Leave a Reply