Header Ads
Breaking News

ಪುತ್ತೂರು: ಪ್ರತಿಷ್ಠಿತ ಕ್ಯಾಂಪ್ಕೋದ 2020-25ನೇ ಸಾಲಿನ ಆಡಳಿತ ಮಂಡಳಿಗೆ 16 ನಿರ್ದೇಶಕರ ಅವಿರೋಧ ಆಯ್ಕೆ

ಪುತ್ತೂರು: ಪ್ರತಿಷ್ಠಿತ ಕ್ಯಾಂಪ್ಕೋದ 2020-25ನೇ ಸಾಲಿನ ಆಡಳಿತ ಮಂಡಳಿಗೆ 16 ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ಹಾಲಿ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹಾಗೂ ಕೆದಿಲ ರಾಘವೇಂದ್ರ ಭಟ್‌ರವರಿಗೆ ಸ್ಥಾನ ಲಭಿಸಿದೆ. ಕರ್ನಾಟಕದಿಂದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಹಾಲಿ ಅಧ್ಯಕ್ಷ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಎಸ್.ಆರ್.ಸತೀಶ್ಚಂದ್ರ, ಕೆದಿಲ ಗ್ರಾಮದ ರಾಘವೇಂದ್ರ ಭಟ್ ಕೆದಿಲ, ಉಡುಪಿ ಕುಂದಾಪುರದ ಕಿಶೋರ್ ಕುಮಾರ್ ಕೂಡ್ಗಿ, ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಎಂ. ಮಹೇಶ್ ಚೌಟ, ಶಿವಮೊಗ್ಗ ಹೊಸನಗರದ ರಾಘವೇಂದ್ರ ಎಚ್.ಎಮ್., ಉಡುಪಿ ಕಾರ್ಕಳದ ದಯಾನಂದ ಹೆಗ್ಡೆ, ಉತ್ತರ ಕನ್ನಡ ಶಿರಸಿಯ ಶಂಭುಲಿಂಗ ಗಣಪತಿ ಹೆಗಡೆ, ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಕೃಷ್ಣ ಪ್ರಸಾದ್ ಮಡ್ತಿಲ, ಕೇರಳದಿಂದ ಶಂಕರನಾರಾಯಣ ಭಟ್ ಖಂಡಿಗೆ, ರಾಧಾಕೃಷ್ಣನ್, ಪದ್ಮರಾಜ್ ಪಟ್ಟಾಜೆ, ಬಾಲಕೃಷ್ಣ ರೈ ಬಾನೊಟ್ಟು, ಜಯರಾಮ ಸರಳಾಯ, ಸತ್ಯನಾರಾಯಣ ಪ್ರಸಾದ, ಸುರೇಶ್ ಕುಮಾರ್ ಶೆಟ್ಟಿ, ಡಾ.ಜಯಪ್ರಕಾಶ್ ನಾರಾಯಣ್ ಟಿ.ಕೆ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಲ್ಲರೂ ಬೆಜೆಪಿ ಬೆಂಬಲಿತ ಸಹಕಾರ

ಭಾರತಿಯ ಅಭ್ಯರ್ಥಿಗಳಾಗಿದ್ದು ಕ್ಯಾಂಪ್ಕೋಗೆ ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಡಿ.13ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯಲಿದೆ.
ಎಸ್.ಆರ್.ಸತೀಶ್ಚಂದ್ರ: ಬಂಟ್ವಾಳ ತಾಲೂಕಿನ ಪುಣಚ ನಿವಾಸಿಯಾಗಿರುವ ಎಸ್.ಆರ್.ಸತೀಶ್ಚಂದ್ರರವರು ಪ್ರಸ್ತುತ ಕ್ಯಾಂಪ್ಕೋದ ಅಧ್ಯಕ್ಷರಾಗಿದ್ದು ಇದೀಗ ನಿರ್ದೇಶಕರಾಗಿ ಪುನರಾಯ್ಕೆಗೊಂಡಿದ್ದಾರೆ. ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷರೂ ಆಗಿದ್ದಾರೆ. ಸತೀಶ್ಚಂದ್ರರವರು ಕಳೆದ ಎರಡೂವರೆ ದಶಕಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸಹಕಾರ ಭಾರತಿ ಕರ್ನಾಟಕ ಇದರ ರಾಜ್ಯಾಧ್ಯಕ್ಷರಾಗಿ, ಪುಣಚ ಶ್ರೀದೇವಿ ಉನ್ನತ ಪ್ರಾಥಮಿಕ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಅರೇಕಾ ಮಾರ್ಕೆಟಿಂಗ್ ಸೊಸೈಟೀಸ್ ಫೆಡರೇಶನ್ ಶಿವಮೊಗ್ಗ ಇದರ ನಿರ್ದೇಶಕರಾಗಿ, ಅರೆಕಾನೆಟ್ ರಿಸರ್ಚ್ ಡೆವಲಪ್‌ಮೆಂಟ್ ಪೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿಯಾಗಿ, ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಕರ್ನಾಟಕ ರಾಜ್ಯ ಸೌಹಾರ್ದ ಕೋ-ಅಪರೇಟಿವ್ ಲಿಮಿಟೆಡ್‌ನ ಅಧ್ಯಕ್ಷರಾಗಿ, ಪುಣಚ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ, ಸೌತ್ ಕೆನರಾ ಅಗ್ರಿಕಲ್ಚರಿಸ್ಟ್ಸ್ ಮಾರ್ಕೆಟಿಂಗ್ ಸೊಸೈಟಿ ಲಿಮಿಟೆಡ್‌ನ ಅಧ್ಯಕ್ಷರಾಗಿ, ಸೌತ್ ಕೆನರಾ ಸೆಂಟ್ರಲ್ ಕೋ ಒಪರೇಟಿವ್ ಹೋಲ್‌ಸೇಲ್ ಸ್ಟೋರ್‍ಸ್ ಮಂಗಳೂರು ಇದರ ನಿರ್ದೇಶಕರಾಗಿ, ಬಂಟ್ವಾಳ ಎಪಿಎಂಸಿ ನಿರ್ದೇಶಕರಾಗಿ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಚೀನಾ, ಹಾಂಗ್‌ಕಾಂಗ್, ಥೈಲ್ಯಾಂಡ್, ಮೆಕ್ಸಿಕೊ, ದುಬೈ ಮತ್ತು ಇಂಗ್ಲೆಂಡ್ ಮೊದಲಾದ ದೇಶಗಳಿಗೆ ಪ್ರವಾಸ ಮಾಡಿ ಸಹಕಾರಿ ಕಾನೂನು, ಅಭ್ಯಾಸಗಳು ಸೇರಿದಂತೆ ಸಹಕಾರ ರಂಗದ ಕುರಿತು ಹೆಚ್ಚಿನ ಅಧ್ಯಯನ ನಡೆಸಿರುವ ಸತೀಶ್ವಂದ್ರರವರು ಕೃಷಿ ಪರಂಪರೆಯಿರುವ ಕುಟುಂಬದಿಂದ ಬೆಳೆದು ಬಂದವರಾಗಿದ್ದು ಕೃಷಿ ಕ್ಷೇತ್ರದಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಕೃಷಿ ವಿಭಾಗದಲ್ಲಿ ಅವರು ಮಾಡಿರುವ ಆವಿಷ್ಕಾರಗಳು ಯುವ ಪೀಳಿಗೆ ಸೇರಿದಂತೆ ಕೃಷಿಕ ಸಮುದಾಯಕ್ಕೇ ಸ್ಪೂರ್ತಿಯಾಗಿದೆ. ಸಹಕಾರಿ, ಕೃಷಿ ಮಾತ್ರವಲ್ಲದೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿಯೂ ಇವರು ಸಕ್ರಿಯರಾಗಿದ್ದಾರೆ.

ರಾಘವೇಂದ್ರ ಭಟ್ ಕೆದಿಲ: ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕೆದಿಲ ನಿವಾಸಿಯಾಗಿರುವ ರಾಘವೇಂದ್ರ ಭಟ್‌ರವರು ಕೆದಿಲ ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕರಾಗಿದ್ದು 1996ರಿಂದ ಈ ತನಕವೂ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಂಟ್ವಾಳ ತಾಲೂಕಿನ ಕೆದಿಲ ದುರ್ಗಾಭವನ ಎಂದೇ ಖ್ಯಾತರಾಗಿದ್ದ ದಿ. ಕೃಷ್ಣ ಭಟ್‌ರವರ ಪುತ್ರರಾಗಿರುವ ಇವರು ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಕೆದಿಲ ಗ್ರಾ.ಪಂ ಸದಸ್ಯರಾಗಿ, ಪುತ್ತೂರು ಬಿಜೆಪಿ ಮಂಡಲದ ಕೋಶಾಧಿಕಾರಿಯಾಗಿ, ಪ್ರಸ್ತುತ ದ.ಕ.ಜಿಲ್ಲಾ ಬಿಜೆಪಿ ರೈತ ಮೋರ್ಛಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಪುತ್ತೂರು ಅಸೋಸಿಯೇಟ್ಸ್ ಆಫ್ ಸಿವಿಲ್ ಇಂಜಿನಿಯರ್‌ನ ಉಪಾಧ್ಯಕ್ಷಾಗಿರುವ ಇವರು ಕಳೆದ ವರ್ಷ ಅಂತರ್ಜಲ ಉಳಿಸುವ ನಿಟ್ಟಿನಲ್ಲಿ ಎರ್ದುಕುಲ ಎಂಬಲ್ಲಿ ತೋಡುಗಳಿಗೆ ಸಾಂಪ್ರದಾಯಿಕ ಹಲಗೆಗಳನ್ನು ಇಟ್ಟು ನೀರು ಉಳಿಸುವ ಯೋಜನೆ ಆರಂಭಿಸಿದ್ದು ಇದಕ್ಕಾಗಿ ಊರಿಗೆ ಊರೇ ಅವರನ್ನು ಅಭಿನಂದಿಸಿತ್ತು. ಅದೇ ರೀತಿ ಸಂಸದರ ಮತ್ತು ಶಾಸಕರ ಅನುದಾನದ ಮೂಲಕ ಕೆದಿಲ-ಪೆರ್ನೆಗೆ ಸಂಪರ್ಕ ಕಲ್ಪಿಸುವ ಕಾಂತುಕೊಡಿ ಗಿಟ್ಟದಡ್ಕ ಎಂಬಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಸೇತುವೆ ನಿರ್ಮಾಣಕ್ಕೆ ಮತ್ತು ರಸ್ತೆ ಅಭಿವೃದ್ಧಿಗೆ ಶಾಸಕರ ಮತ್ತು ಸಂಸದರಿಂದ ಅನುದಾನ ತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

Related posts

Leave a Reply

Your email address will not be published. Required fields are marked *