Header Ads
Header Ads
Breaking News

ಪುತ್ತೂರು : ಮಿನಿ ವಿಧಾನ ಸೌಧಕ್ಕೆ ಉದ್ಯಮಿಯಿಂದ ವ್ಹೀಲ್ ಚೆಯರ್ ಕೊಡುಗೆ

ಪುತ್ತೂರಿನ ಉದ್ಯಮಿ ಶಿವಪ್ರಸಾದ್ ಶೆಟ್ಟಿ ಮಿನಿ ವಿಧಾನ ಸೌಧದ ಎಲ್ಲ ಕಚೇರಿಗಳಿಗೆ ತೆರಳುವ ಅಶಕ್ತರಿಗೆ ಅನುಕೂಲವಾಗುವಂತೆ ವೀಲ್ ಚೆಯರ್ ಮತ್ತು ಉಪನೋಂದಣಿ ಕಚೇರಿಗೆ5 ಪ್ಲಾಸ್ಟಿಕ್ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಪುತ್ತೂರಿನ ಮಿನಿವಿಧಾನ ಸೌಧದಲ್ಲಿ ಲಿಫ್ಟ್ ಸೌಲಭ್ಯವಿದ್ದರೂ ಅಶಕ್ತ ವೃದ್ಧರಿಗೆ ಮಿನಿವಿಧಾನ ಸೌಧದ ಯಾವುದೇ ಕಚೇರಿಗೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಪುತ್ತೂರಿನ ಮಿನಿವಿಧಾನ ಸೌಧದ ಮಹಡಿಯಲ್ಲಿರುವ ಪುತ್ತೂರು ಉಪನೋಂದಣಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯೂ ಕೂಡಾ ಕಡಿಮೆ ಇತ್ತು. ಇದನ್ನು ಮನಗಂಡು ಈ ಕೊಡುಗೆಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಅಶಕ್ತರಿಗೆ ಅನುಕೂಲವಾಗಲು ಮಾನವೀಯ ದೃಷ್ಠಿಯಿಂದ ಉದ್ಯಮಿ ಶಿವಪ್ರಸಾದ್ ಶೆಟ್ಟಿ ಈ ಕೊಡುಗೆಯನ್ನು ನೀಡಿದ್ದಾರೆ. ಸಾರ್ವಜನಿಕರು ಸರಕಾರಿ ಕಚೇರಿಗಳ ವ್ಯವಸ್ಥೆಗಳಿಗೆ ಪೂರಕವಾಗಿ ಸಹಕಾರ ನೀಡಬೇಕು. ಈ ಮೂಲಕ ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ಪುತ್ತೂರು ತಹಶೀಲ್ದಾರ್ ಡಾ. ಪ್ರದೀಪ್, ಪುತ್ತೂರು ಉಪನೋಂದಣಾಧಿಕಾರಿ ಕವಿತಾ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಡಿ. ಶಂಭು ಭಟ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply