Header Ads
Breaking News

ಪುತ್ತೂರು: ಯಕ್ಷಗಾನ ಕಲಾವಿದರಿಗೆ, ಕಾರ್ಮಿಕರಿಗೆ ಅಗತ್ಯ ವಸ್ತುಗಳ ಆಹಾರದ ಕಿಟ್ ವಿತರಣೆ

ಕೊರೋನಾ ಮಹಾಮಾರಿಯಿಂದ ಸಂಕಷ್ಟಕ್ಕೆ ಒಳಗಾದ ಯಕ್ಷಗಾನ ಕಲಾವಿದರಿಗೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ಕೊಲ್ಲುರು ಶ್ರೀ ಮೂಕಾಂಬಿಕಾ ದೇವಳದ ಮೂಲಕ ರೂ. 20ಲಕ್ಷ ವೆಚ್ಚದಲ್ಲಿ 1800 ಅಗತ್ಯ ವಸ್ತುಗಳ ಆಹಾರದ ಕಿಟ್‍ಗಳನ್ನು ಕಲಾವಿದರಿಗೆ, ಕಾರ್ಮಿಕರಿಗೆ ವಿತರಣೆ ಈಗಾಗಲೇ ರಾಜ್ಯದ ಬೇರೆ ಬೇರೆ ಭಾಗದಲ್ಲಿ ಮಾಡಲಾಗುತ್ತಿದ್ದು, ಮೇ 10ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಪುತ್ತೂರಿನ ಯಕ್ಷಗಾನ ಕಲಾವಿದರಿಗೆ ಮತ್ತು ಕಾರ್ಮಿಕರಿಗೆ ವಿತರಣೆ ಮಾಡಲಾಯಿತು. ಉಡುಪಿ ಯಕ್ಷಗಾನ ಕಲಾರಂಗ ಸಂಸ್ಥೆ ಈ ವಿತರಣೆಯ ನೇತೃತ್ವ ವಹಿಸಿಕೊಂಡಿದ್ದು, ಶ್ರೀ ಕ್ಷೇತ್ರ ಮಂದಾರ್ತಿ ದೇವಳದಿಂದ ನಾಲ್ಕು ಬಸ್‍ನಲ್ಲಿ ಕಿಟ್ ವಿತರಣೆ ನಡೆಯಿತು.ಈ ಸಂದರ್ಭ ಉಡುಪಿ ಯಕ್ಷಗಾನ ಕಲಾರಂಗ ಸಂಸ್ಥೆಯ ಕಾರ್ಯದರ್ಶಿ ಮುರಳಿ ಕಡೆಕ್ಕಾರ್, ಬಾಲಕೃಷ್ಣ, ಕಿಶೋರ್, ಪುತ್ತೂರಿನ ಯಕ್ಷಗಾನ ಕಲಾವಿದರಾದ ತಿಲಕ್‍ರಾಜ್ ಹೆಗ್ಡೆ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *