Header Ads
Breaking News

ಪುತ್ತೂರು : ರಾಷ್ಟ್ರೀಯ ಸಂಗೀತ ನೃತ್ಯೋತ್ಸವಕ್ಕೆ ಚಾಲನೆ

ಶಾಸ್ತ್ರೀಯ ಕಲಾ ಪ್ರಕಾರಗಳು ಭಾರತೀಯ ಸಂಸ್ಕೃತಿಯ ಅಂತಃಸತ್ವಗಳಾಗಿದ್ದು, ಸಂಗೀತ, ಭರತನಾಟ್ಯ, ಗಮಕ, ಸುಗಮ ಸಂಗೀತ ಇತ್ಯಾದಿ ಕಲಾ ಪ್ರಕಾರಗಳ ಪ್ರಚಾರ ಅಗತ್ಯವಾಗಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ರಾಷ್ಟ್ರೀಯ ಸಂಗೀತ ನೃತ್ಯೋತ್ಸವದಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಕಲ್ಪಿಸಿದೆ. ಶಾಸ್ತ್ರೀಯ ಕಲೆಗಳನ್ನು ಬೆಂಬಲಿಸಲು ಇದರಿಂದ ಸಾಧ್ಯವಾಗುತ್ತದೆ ಎಂದು ತಾಪಂ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಹೇಳಿದರು.

ಶುಕ್ರವಾರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಆಶ್ರಯದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಆಯೋಜಿಸಲಾದ ಎರಡು ದಿನಗಳ ರಾಷ್ಟ್ರೀಯ ಸಂಗೀತ ನೃತ್ಯೋತ್ಸವವನ್ನು ಅವರು ಉದ್ಘಾಟಿಸಿದರು.

ವೇದಿಕೆಯಲ್ಲಿ ಅಕಾಡೆಮಿಯ ಸದಸ್ಯ ಸುಧೀಂದ್ರ ಬಾಬು, ಅಕಾಡೆಮಿಯ ಸದಸ್ಯೆ ವಿದುಷಿ ಶಾರದಾ ಮಣಿಶೇಖರ್, ಅಕಾಡೆಮಿ ಸದಸ್ಯೆ ವಿದುಷಿ ಹೇಮಾ ವಾಗ್ಮೋರೆ, ಡಾ. ಶ್ರೀಪ್ರಕಾಶ್, ಉಪಸ್ಥಿತರಿದ್ದರು

Related posts

Leave a Reply

Your email address will not be published. Required fields are marked *