Header Ads
Header Ads
Breaking News

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ

ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವವು ದೇವಳದ ತಂತ್ರಿ ಕುಂಟಾರು ರವೀಶ ತಂತ್ರಿಯವರ ಮತ್ತು ವ್ಯವಾಸ್ಥಾಪನಾಸಮಿತಿ ಅಧ್ಯಕ್ಷ ಎನ್ ಸುಧಾಕರ ಶೆಟ್ಟಿ ಉಪಸ್ಥಿತಿಯಲ್ಲಿ ವಿಜ್ರಂಭಣೆಯಿಂದ ನಡೆಯಿತು 

ಸಂಜೆ ಶ್ರೀ ದೇವರ ಪೂಜೆಯ ವೇಳ ರಥ ಬೀದಿಯಲ್ಲಿ ಭಕ್ತರಿಂದ ಹಣತೆಯ ರಂಗೋಲ ಮೂ ಬಂತು ರಾಜಗೋಪುರ ಸುತ್ತು ದೇವಳದ ಒಳಾಂಗಣದಲಲ್ಲಿ ಗರ್ಭಗುಡಿಯ ಗೋಪುರದ ಸುತ್ತು ಹಣತೆಯನ್ನು ಬೆಳಗಿಸುವ ಮೂಲಕ ದೇವಸ್ಥಾನ ಬೆಳಕಿನಿಂದ ಕಂಗೋಳಿಸುತ್ತಿತ್ತು.

ದೇವರ ಬಲಿ ಉತ್ಸವ ನಡೆದು ಬಳಿಕ ವಸಂತಕಟ್ಟೆ ಪೂಜೆ ಹಾಗೂ ಚಂದ್ರಮಂಡಲ ರಥೋತ್ಸವ ನಡೆಯಿತು. ಕೊನೆಗೆ ದೇವಳದ ಹಿಂಬದಿಯಲ್ಲಿರುವ ಕೆರೆಯಲ್ಲಿ ತೆಪ್ಪೋತ್ಸವ ನಡೆಯಿತ್ತು ಕೆರೆಯ ಸುತ್ತಲೂ ಹಣತೆಯ ಬೆಳಕು ಕಣ್ಮನ ಸೆಳೆಯುತ್ತಿತ್ತು. ಈ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಲ್ಗೊಂಡರು.

Related posts

Leave a Reply